ವಿಪಕ್ಷ ಉಪ ನಾಯಕರಾಗಿ ಯು.ಟಿ.ಖಾದರ್ ನೇಮಕ
Update: 2022-02-14 22:45 IST
ಬೆಂಗಳೂರು, ಫೆ. 14: ವಿಧಾನಸಭೆ ಪ್ರತಿಪಕ್ಷದ ಉಪ ನಾಯಕರನ್ನಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ಶಾಸಕ ಯು.ಟಿ. ಅಬ್ದುಲ್ ಖಾದರ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ,
ಸೋಮವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಸ್ಪೀಕರ್ ಕಾಗೇರಿ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಯು.ಟಿ. ಅಬ್ದುಲ್ ಖಾದರ್ ಅವರನ್ನು ವಿಪಕ್ಷದ ಉಪ ನಾಯಕರನ್ನಾಗಿ ಪಕ್ಷ ನೇಮಿಸಿದೆ ಎಂದು ತಿಳಿಸಿದ್ದಾರೆಂದು ಸದನಕ್ಕೆ ಮಾಹಿತಿ ನೀಡಿದರು.