ಹಿಜಾಬ್ ಪ್ರಕರಣ: ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ನ್ಯಾಯಾಲಯ
Live ಅಪ್‌ಡೇಟ್ 04:45- ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ನ್ಯಾಯಾಲಯ
ಕುಮಾರ್: ಸಮವಸ್ತ್ರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸರ್ಕಾರ ಹೇಳಿದೆ.
ಕುಮಾರ್: ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದಿಂದ ಯಾವುದೇ ವಿದ್ಯಾರ್ಥಿಯು ಹಿಜಾಬ್ ಧರಿಸುವುದನ್ನು ನಿಷೇಧಿಸುವುದಿಲ್ಲ ಎಂಬ ಅಂಶವನ್ನು ದಯವಿಟ್ಟು ಗಮನಿಸಿ. ಕಾಲೇಜು ಆಡಳಿತ ಸಮಿತಿ ಅದನ್ನು ಶಿಫಾರಸು ಮಾಡುತ್ತದೆ ಎಂದು ಸರಕಾರದ ಆದೇಶ ಹೇಳುತ್ತದೆ. ಅಲ್ಲಿಯವರೆಗೆ, ಸಾರ್ವಜನಿಕ ಸುವ್ಯವಸ್ಥೆ, ಸಮಾನತೆ ಅಥವಾ ಏಕತೆಗೆ ಧಕ್ಕೆಯಾಗದ ಬಟ್ಟೆಗಳನ್ನು ಧರಿಸಬೇಕು ಎಂದು ಅದು ಹೇಳಿದೆ.
ಕುಮಾರ್: ನಾವು ಯಾವುದೇ ಸಾರ್ವಜನಿಕ ಸುವ್ಯವಸ್ಥೆ, ಸಮಾನತೆ ಅಥವಾ ಏಕತೆಯನ್ನು ಉಲ್ಲಂಘಿಸುತ್ತಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯು ಶಾಸನದ ಅಡಿಯಲ್ಲಿ ಅಸ್ತಿತ್ವದಲ್ಲಿಲ್ಲದ ಸಂಸ್ಥೆಯಾಗಿದೆ. ಇದು ಕಾನೂನು ಬಾಹಿರ ಅಧಿಕಾರವಾಗಿದ್ದು, ಈಗ ಸಮವಸ್ತ್ರವನ್ನು ಸೂಚಿಸುವ ಅಧಿಕಾರವನ್ನೂ ಹೊಂದಿದೆ. ಇದು ಕಾಯ್ದೆಗಳ ಯೋಜನೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ.
ನ್ಯಾಯಾಲಯವು ಈಗ ಸಲ್ಲಿಕೆಗಳನ್ನು ಪ್ರಾರಂಭಿಸಲು ಹಿರಿಯ ವಕೀಲ ಪ್ರೊಫೆಸರ್ ರವಿವರ್ಮ ಕುಮಾರ್ ಅವರಿಗೆ ಅನುಮತಿ ನೀಡಿದೆ.
ಕುಮಾರ್: ದಯವಿಟ್ಟು ರಾಜ್ಯವು ಸಲ್ಲಿಸಿದ ಆಕ್ಷೇಪಣೆಯ ಹೇಳಿಕೆಯನ್ನು ಉಲ್ಲೇಖಿಸಿ.
ಕುಮಾರ್: ಯೂನಿಫಾರ್ಮ್ ಡ್ರೆಸ್ ಕೋಡ್ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂಬುವುದನ್ನು ತಿಳಿದಕೊಳ್ಳಿ. ಇದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಮುಂದಾಗಿದೆ. ಸದ್ಯಕ್ಕೆ ಸರ್ಕಾರವು ಯಾವುದೇ ಸಮವಸ್ತ್ರವನ್ನು ಸೂಚಿಸಿಲ್ಲ ಅಥವಾ ಹಿಜಾಬ್ ಧರಿಸುವುದನ್ನು ನಿಷೇಧಿಸಿಲ್ಲ. ಸರಕಾರದ ಆದೇಶದಲ್ಲೂ ಹಿಜಾಬ್ ಧರಿಸಬೇಡಿ ಎಂದು ಹೇಳಿಲ್ಲ.
ಕಾಮತ್: ನಾನು ʼಉಚ್ಚಾಟಿತʼ ಪದವನ್ನು ತಪ್ಪಾಗಿ ಬಳಸಿರಬಹುದು. ಅವರಿಗೆ ಪ್ರವೇಶವನ್ನು ಅನುಮತಿಸಲಾಗುತ್ತಿಲ್ಲ.
ಸಿಜೆ: ಅವರಿಗೆ ತರಗತಿಯೊಳಗೆಯೋ ಅಥವಾ ಶಾಲೆಯಲ್ಲಿ ಪ್ರವೇಶವನ್ನು ಅನುಮತಿಸಲಾಗುವುದಿಲ್ಲವೇ?
ಕಾಮತ್: ತರಗತಿ ಅಥವಾ ಶಾಲೆಯ ಒಳಗೆ ಅನುಮತಿಸದಿರುವುದು ಅದೇ ಪರಿಣಾಮಗಳನ್ನು ಉಂಟುಮಾಡುತ್ತದೆ.
ಕಾಮತ್ ಪೀಠವು ನೀಡಿದ ಮಧ್ಯಂತರ ಆದೇಶವನ್ನು ಉಲ್ಲೇಖಿಸಿದರು.
ಸಿಜೆ: ಆ ಆದೇಶದಲ್ಲಿ ನಾವು ಏನನ್ನೂ ನಿರ್ಧರಿಸಿಲ್ಲ.
ಕಾಮತ್: ನೀವು ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸಲು ಅನುಮತಿಸಬೇಕು ಎಂದು ತಮ್ಮಲ್ಲಿ ಕೋರುತ್ತಿದ್ದೇನೆ.
ಈ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸುತ್ತದೆ. ದಯವಿಟ್ಟು ಈ ಮಧ್ಯಂತರ ಆದೇಶವನ್ನು ಮುಂದುವರಿಸಬೇಡಿ.
ಕಾಮತ್ ತನ್ನ ಸಲ್ಲಿಕೆಗಳನ್ನು ಮುಕ್ತಾಯಗೊಳಿಸುತ್ತಾರೆ. ವಿಚಾರಣೆಗಾಗಿ ಪೀಠಕ್ಕೆ ಮತ್ತು ಸಂಶೋಧನೆಯಲ್ಲಿ ತನಗೆ ಸಹಾಯ ಮಾಡಿದ ತನ್ನ ಸಹವರ್ತಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.
Live ಅಪ್‌ಡೇಟ್ 04:10
ಕಾಮತ್: ಇದು ತಲೆಗೆ ಸ್ಕಾರ್ಫ್ ಧರಿಸುವ ವಿಚಾರ ಮತ್ತು ನನ್ನ ಸಮವಸ್ತ್ರವನ್ನು ಬದಲಾಯಿಸದ ಉಪದ್ರವವಲ್ಲದ ಅಭ್ಯಾಸವಾಗಿದೆ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಮುಖವಾಗಿದೆ. ಸ್ಕಾರ್ಫ್ ಧರಿಸಲು ಸಣ್ಣ ವಿನಾಯಿತಿ ನೀಡಿದರೆ, ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಅನುಗುಣವಾಗಿರುತ್ತದೆ.
ಮುಖ್ಯ ನ್ಯಾಯಮೂರ್ತಿ: ನಿಮ್ಮ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆಯೇ?
ಕಾಮತ್: ಅವರಿಗೆ ಪ್ರವೇಶಿಸಲು ಅವಕಾಶವಿಲ್ಲ.
ನ್ಯಾಯಮೂರ್ತಿ ದೀಕ್ಷಿತ್: ಉಚ್ಚಾಟನೆ ಮತ್ತು ಪ್ರವೇಶಕ್ಕೆ ಅವಕಾಶ ನೀಡದಿರುವುದು ಎರಡೂ ವಿಭಿನ್ನವಾಗಿದೆ.
ಸಿಜೆ: ಅವರನ್ನು ಹೊರಹಾಕದಿದ್ದರೆ ನೀವು ʼಅನುಪಾತದ ಸಿದ್ಧಾಂತವನ್ನುʼ ಹೇಗೆ ಅನ್ವಯಿಸುತ್ತೀರಿ?
ನ್ಯಾಯಮೂರ್ತಿ ದೀಕ್ಷಿತ್: ಟಿಕೆಟ್ ಇಲ್ಲದ ಕಾರಣ ಪ್ರಯಾಣಿಕರು ರೈಲಿನಲ್ಲಿ ಪ್ರವೇಶವನ್ನು ಅನುಮತಿಸುವುದಿಲ್ಲ.. ಅದು ಹೇಗೆ ಪ್ರಮಾಣಾನುಗುಣ ಸಿದ್ಧಾಂತದ ಅಡಿಯಲ್ಲಿ ಬರುತ್ತದೆ?
ಕಾಮತ್: ಈಗ, ನಾನು ಬೀದಿಯಲ್ಲಿ ಹೋಗುತ್ತಿರುವಾಗ ಯಾರಾದರೂ ಬಂದು, ನನಗೆ ದೇವದತ್ ಕಾಮತ್ ನನ್ನು ಇಷ್ಟವಿಲ್ಲ ಎಂದು ಹೇಳಿದರೆ ಕೂಡಲೇ ರಾಜ್ಯ ಸರಕಾರ ಬಂದು, ಇದು ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿ ನನ್ನನ್ನು ಬೀದಿಯಲ್ಲಿ ಹೋಗುವುದನ್ನು ನಿಷೇಧಿಸಲು ಸಾಧ್ಯವಿಲ್ಲ.
ಕಳೆದ ದಿನ ಆದೇಶವನ್ನು ಜಾರಿಗೊಳಿಸಿದಾಗ, ಬಹುಶಃ ನ್ಯಾಯಾಧೀಶರು ಜಾತ್ಯತೀತತೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಆದರೆ ನಮ್ಮ ಸೆಕ್ಯುಲರಿಸಂ ಅಂದರೆ ಟರ್ಕಿ ಸೆಕ್ಯುಲರಿಸಂ ಅಲ್ಲ. ನಮ್ಮದು ಧನಾತ್ಮಕ ಸೆಕ್ಯುಲರಿಸಂ. ನಾವು ಎಲ್ಲಾ ಧರ್ಮಗಳನ್ನು ಸತ್ಯವೆಂದು ಗುರುತಿಸುತ್ತೇವೆ.
ಅರುಣಾ ರಾಯ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಕಾಮತ್ ಉಲ್ಲೇಖಿಸಿದ್ದಾರೆ: ನಮ್ಮ ಸೆಕ್ಯುಲರಿಸಂ ವೈದಿಕ ದೃಷ್ಟಿಕೋನಸಲ್ಲಿರುವ "ಸರ್ವ ಧರ್ಮ ಸಮ ಭಾವ"ದಿಂದಾಗಿದೆ.
ತೀರ್ಪಿನ ಕುರಿತು ಬರೆದಿರುವ ಟಿಪ್ಪಣಿಯನ್ನು ನೀಡುವುದಾಗಿ ಕಾಮತ್ ಹೇಳುತ್ತಾರೆ. ಅದು ಉತ್ತಮ ಎಂದು ನ್ಯಾಯಮೂರ್ತಿಗಳು ಪ್ರತಿಕ್ರಿಯಿಸುತ್ತಾರೆ. ಕೆನಡಾದ ತೀರ್ಪು ಸಿಖ್ ವಿದ್ಯಾರ್ಥಿಗೆ ಕಿರ್ಪಾನ್ ಧರಿಸಲು ಅನುಮತಿ ನೀಡಿದೆ ಎಂದು ಕಾಮತ್ ಹೇಳುತ್ತಾರೆ.
ಕಾಮತ್: 'ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ರಾಜ್ಯ ಹೇಳಲು ಸಾಧ್ಯವಿಲ್ಲ' ಎಂದು ನಿನ್ನೆ ನಾನು ಹೇಳಿದ್ದೆ .ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗಿದೆ ಮತ್ತು ಹಕ್ಕುಗಳನ್ನು ಆಚರಿಸಲು ಅನುಕೂಲವಾಗುವಂತೆ ಧನಾತ್ಮಕ ವಾತಾವರಣವನ್ನು ಸೃಷ್ಟಿಸಬೇಕು ಎಂಬ ಸುಲಭವಾದ ವಾದವನ್ನು ರಾಜ್ಯವು ಸೃಷ್ಟಿಸಲು ಸಾಧ್ಯವಿಲ್ಲ.
ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಪ್ರಸ್ತಾಪಿಸಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಸುಪ್ರೀಂಕೋರ್ಟ್ ತೀರ್ಪನ್ನು ಕಾಮತ್ ಉಲ್ಲೇಖಿಸಿದ್ದಾರೆ.
ಯಾರಾದರೂ ತಲೆಗೆ ಸ್ಕಾರ್ಫ್ ಧರಿಸಿದರೆ ಅದು ಗಲಭೆಗೆ ಕಾರಣವಾಗುತ್ತದೆ ಎಂದು ರಾಜ್ಯ ಹೇಳಿದರೆ ಅದನ್ನು ನಾವು ಅನುಮತಿಸುವುದಿಲ್ಲ, ಅದು ಅನುಮತಿಸಲಾಗದ ವಾದವಾಗಿದೆ.
ಕಾಮತ್‌ಗೆ ಮು.ನ್ಯಾಯಮೂರ್ತಿ ಪ್ರಶ್ನೆ: ನಿನ್ನೆ ನೀವು ಕೇವಲ 10 ನಿಮಿಷ ತೆಗೆದುಕೊಳ್ಳುವುದಾಗಿ ಹೇಳಿದ್ದೀರಾ?
ಕಾಮತ್: ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವಾಗಿತ್ತು. ನಾನು ಏನನ್ನೂ ಪುನರಾವರ್ತಿಸಿಲ್ಲ. ಬೇಗ ಮುಗಿಸುತ್ತೇನೆ.
ಸಿಜೆ: ನಾವು ಅವಸರದಲ್ಲಿಲ್ಲ. ಆದರೆ ನೀವು ಅವಸರದಲ್ಲಿರಬೇಕು.
ಕಾಮತ್ ಅವರು ಕೆನಡಾದ ತೀರ್ಪನ್ನು ಉಲ್ಲೇಖಿಸುತ್ತೇನೆ ಎಂದು ಹೇಳುತ್ತಾರೆ.
ಮುಖ್ಯ ನ್ಯಾಯಮೂರ್ತಿ: ಈ ಪ್ರಕರಣದ ಸಮಸ್ಯೆಗಳಿಗೆ ಈ ತೀರ್ಪುಗಳು ಹೇಗೆ ಸಂಬಂಧಿಸಿವೆ? ನಾವು ನಮ್ಮ ಸಂವಿಧಾನವನ್ನು ಅನುಸರಿಸುತ್ತೇವೆ.
ದಕ್ಷಿಣ ಆಫ್ರಿಕಾದ ತೀರ್ಪನ್ನು ಉಲ್ಲೇಖಿಸುವುದನ್ನು ಕಾಮತ್ ಮುಂದುವರಿಸುತ್ತಾರೆ. "ವಿದ್ಯಾರ್ಥಿನಿಯ ಮೂಗುತಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಆಕೆಗೆ ಮೂಗುತಿ ಧರಿಸಲು ಅವಕಾಶ ನೀಡುವುದು ಶಾಲೆಯ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆಯೇ?" ಎಂಬ ಪ್ರಶ್ನೆಯನ್ನು ನ್ಯಾಯಾಲಯ ಕೇಳಿದೆ. ಈ ಪ್ರಕರಣವು ಸಮವಸ್ತ್ರದ ಬಗ್ಗೆ ಅಲ್ಲ, ಆದರೆ ಅಸ್ತಿತ್ವದಲ್ಲಿರುವ ಸಮವಸ್ತ್ರಗಳಿಗೆ ನೀಡುವ ವಿನಾಯಿತಿಗಳ ಬಗ್ಗೆ. ಇಲ್ಲಿ ಸಮವಸ್ತ್ರ ಬದಲಾಯಿಸಬೇಕು ಎಂದು ಹೇಳುವುದಲ್ಲ ಆದರೆ ಸಮವಸ್ತ್ರದ ಜೊತೆಗೆಒಂದು ಹೆಚ್ಚುವರಿ ಬಟ್ಟೆಯ ವಿಷಯವಾಗಿದೆ. "ಧಾರ್ಮಿಕ ಮತ್ತು ಸಾಂಸ್ಕೃತಿಕ ವಿನಾಯಿತಿಗಳನ್ನು ನೀಡುವ ಮೂಲಕ ಸಮವಸ್ತ್ರಗಳು, ಕಾರ್ಯನಿರ್ವಹಿಸುವ ಉತ್ತಮ ಉದ್ದೇಶಗಳನ್ನು ದುರ್ಬಲಗೊಳಿಸುವುದಿಲ್ಲ" ಎಂದು ಅವರು ದಕ್ಷಿಣ ಆಫ್ರಿಕಾ ತೀರ್ಪನ್ನು ಉಲ್ಲೇಖಿಸುತ್ತಾರೆ.
ಬಾಲಕಿಯು ಮೂಗುತಿಯನ್ನು ಎರಡು ವರ್ಷಗಳಿಂದ ಧರಿಸುತ್ತಿದ್ದು, ಇದರಿಂದ ಶಾಲೆಯ ಶಿಸ್ತಿಗೆ ಯಾವುದೇ ಭಂಗ ಬರಲಿಲ್ಲ ಎಂಬುವುದನ್ನು ನ್ಯಾಯಾಲಯ ಗಮನಿಸಿತು ಎಂದು ಕಾಮತ್ ಹೇಳುತ್ತಾರೆ.
ಕಾಮತ್: ಮುಖ್ಯ ನ್ಯಾಯಮೂರ್ತಿಗಳು ನನಗೆ ಕೇಳಿದ್ದೂ ಇದನ್ನೇ ಆಗಿತ್ತು. ಆ ವಿದ್ಯಾರ್ಥಿನಿಯರು ಸ್ಕಾರ್ಫ್ ಹಾಕಿಕೊಂಡಿದ್ದರಾ? ಎಂದು. ಹೌದು, ಅವರು ಹಿಂದಿನಿಂದಲೂ ಧರಿಸಿದ್ದರು ಮತ್ತು ವಿದ್ಯಾರ್ಥಿಗಳು ಶಾಲೆಯ ಶಿಸ್ತನ್ನು ಅನುಸರಿಸುತ್ತಿದ್ದರು.
ಕಾಮತ್ ತೀರ್ಪನ್ನು ಓದುತ್ತಾರೆ: ಮೂಗಿಗೆ ಧರಿಸುವ ಆಭರಣವು ವಿದ್ಯಾರ್ಥಿನಿಯ ಧರ್ಮ, ಸಂಸ್ಕತಿಯ ಕಡ್ಡಾಯ ಸಿದ್ಧಾಂತವಲ್ಲ ಎನ್ನುವುದನ್ನು ಪುರಾವೆಗಳೇ ತೋರಿಸುತ್ತದೆ. ಆದರೆ ಇನ್ನು ಕೆಲವು ಪುರಾವೆಗಳು ಮೂಗುತಿ ದಕ್ಷಿಣ ಭಾರತದ ತಮಿಳು ಹಿಂದೂ ಸಂಸ್ಕೃತಿಯ ಸ್ವಯಂಪ್ರೇರಿತ ಅಭಿವ್ಯಕ್ತಿಯಾಗಿದೆ ಎಂದು ದೃಢಪಡಿಸುತ್ತದೆ, ಇದು ಹಿಂದೂ ಧರ್ಮದೊಂದಿಗೆ ಹೆಣೆದುಕೊಂಡಿರುವ ಸಂಸ್ಕೃತಿಯಾಗಿದೆ. ಬಾಲಕಿಯು ಶಾಲೆಯ ಹೊರಗಡೆ ಮೂಗುತಿ ಧರಿಸಬಹುದು ಎಂದು ಶಾಲೆಯವರು ಹೇಳಿಕೆ ನೀಡಿದ್ದರು. ಆದರೆ ಆಕೆಯ ಸಂಪ್ರದಾಯವನ್ನು ಸ್ವಲ್ಪ ಸಮಯದ ವರೆಗೆ ಇಲ್ಲವಾಗಿಸುವುದು ಆಕೆಗೆ ಆಕೆಯ ಧರ್ಮಕ್ಕೆ, ಆಕೆಯ ಸಂಸ್ಕೃತಿ ಉತ್ತಮವಲ್ಲ ಎಂಬ ಸಾಂಕೇತಿಕ ಸಂದೇಶವನ್ನು ರವಾನಿಸುತ್ತದೆ ಎಂದು ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು.
ದಕ್ಷಿಣ ಆಫ್ರಿಕಾದ ತೀರ್ಪನ್ನು ಉಲ್ಲೇಖಿಸುತ್ತಾ ಮುಂದುವರಿದ ಕಾಮತ್, "ಒಂದು ವೇಳೆ ಆ ವಿದ್ಯಾರ್ಥಿನಿ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಮೂಗುತಿಯು ಕೇಂದ್ರಬಿಂದುವಾಗಿದೆ ಎಂದು ಹೇಳಿದರೆ, ನ್ಯಾಯಾಲಯವು ಅದು ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ವಿಚಾರಗಳನ್ನು ಹೊರಗಿನವರು ತೀರ್ಮಾನಿಸಲು ಸಾಧ್ಯವಿಲ್ಲ.
"ಮೂಗುತಿ ಧರಿಸುವ ಅಭ್ಯಾಸವು ದಕ್ಷಿಣ ಭಾರತದಲ್ಲಿ ದೀರ್ಘಕಾಲದ ಸಂಪ್ರದಾಯದ ಒಂದು ಭಾಗವಾಗಿದೆ" ಎಂದು ಹಿಂದೂ ಹುಡುಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾಗಿ ಕಾಮತ್ ಹೇಳುತ್ತಾರೆ. ಈ ಪ್ರಕರಣವನ್ನು ಇಲ್ಲಿ ಓದಬಹುದಾಗಿದೆ. http://www.saflii.org/za/cases/ZACC/2007/21media.pdf
"ಹಿಂದೂ ಹುಡುಗಿಯು ಶಾಲೆಯ ನಿಬಂಧನೆಗಳಿಗೆ ಒಪ್ಪಿಕೊಂಡಿದ್ದಾಳೆ ಎಂದು ಶಾಲೆಯು ವಾದಿಸಿತು. ಮೂಗುತಿಯನ್ನು ಬಳಸುವುದು ಜನಪ್ರಿಯ ಅಭ್ಯಾಸವಲ್ಲ. ಮೂಗುತಿ ನಿಷೇಧವು ಅವಳ ಸಂಸ್ಕೃತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಏಕೆಂದರೆ ಅವಳು ಅದನ್ನು ಶಾಳೆಯ ಹೊರಗೆ ಧರಿಸಲು ಸ್ವತಂತ್ರಳಾಗಿದ್ದಾಳೆ" ಎಂದು ಶಾಲೆಯ ವಾದವನ್ನು ಕಾಮತ್ ಮುಂದಿಡುತ್ತಾರೆ. ಹಿಜಾಬ್ ಪ್ರಕರಣದಲ್ಲೂ ಅದೇ ವಾದ ಮಂಡಿಸಲಾಗಿದೆ ಎಂದು ಅವರು ಹೇಳಿದರು.
ಕಾಮತ್: "ಶಾಲೆಯಲ್ಲಿ ಕೆಲವು ಗಂಟೆಗಳ ಕಾಲ ಹಿಜಾಬ್ ಧರಿಸದಿದ್ದರೆ ಸ್ವರ್ಗ ಕುಸಿಯುತ್ತದೆಯೇ?" ಅವರು ಕೇಳುತ್ತಾರೆ. ಮೂಗುತಿ ಧರಿಸಿದ ಹಿಂದೂ ಹುಡುಗಿಯ ವಿರುದ್ಧ ದಕ್ಷಿಣ ಆಫ್ರಿಕಾದ ಪ್ರಕರಣದಲ್ಲಿ ಶಾಲೆಯ ವಾದವೂ ಇದೇ ಆಗಿತ್ತು.
ಕಾಮತ್ : ಇಲ್ಲಿ ಸಮವಸ್ತ್ರದ ನಿಯಮಗಳಿವೆ ಎಂದು ಭಾವಿಸಿ, ಯಾರೋ ವಿನಾಯಿತಿ ಕೇಳುತ್ತಿದ್ದಾರೆ. ಅವಕಾಶ ಕಲ್ಪಿಸುವುದು ಮತ್ತು ಶಿಕ್ಷಿಸದಿರುವುದು ರಾಜ್ಯ ಮತ್ತು ಶಾಲೆಯ ಕರ್ತವ್ಯ.
ಕಾಮತ್ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ಮತ್ತೊಂದು ತೀರ್ಪನ್ನು ಉಲ್ಲೇಖಿಸುತ್ತಾರೆ.
ನ್ಯಾಯಮೂರ್ತಿ ದೀಕ್ಷಿತ್: ಈ ತೀರ್ಪನ್ನು ಸಾಂವಿಧಾನಿಕ ನಿಬಂಧನೆಗಳ ಆಧಾರದಲ್ಲಿ ನೀಡಲಾಗಿದೆ. ಅದನ್ನು ಹೇಗೆ ಓದಬಹುದು?
ತೀರ್ಪು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲೇಖಿಸುತ್ತದೆ ಎಂದು ಕಾಮತ್ ಹೇಳುತ್ತಾರೆ.
ದಕ್ಷಿಣ ಆಫ್ರಿಕಾದ ತೀರ್ಪು ದಕ್ಷಿಣ ಭಾರತದ ಹಿಂದೂ ಹುಡುಗಿಯೊಬ್ಬಳು ಮೂಗುತಿ ಧರಿಸುವಂತೆ ಅವಕಾಶ ನೀಡಿದೆ ಎಂದು ಕಾಮತ್ ಹೇಳುತ್ತಾರೆ. ಇದೊಂದು ʼಅಪಾಯಕಾರಿʼ ಸಂದರ್ಭಕ್ಕೆ ಕಾರಣವಾಗಬಹುದು ಎಂದು ಶಾಲೆ ಹೇಳಿತ್ತು.
ಕಾಮತ್: ಶಿಕ್ಷಣ ಕಾಯ್ದೆಯಿಂದ ಧಾರ್ಮಿಕ ನಂಬಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಇಲ್ಲದಿದ್ದರೆ, ಇದು ತುಂಬಾ ಅಪಾಯಕಾರಿ ಪ್ರತಿಪಾದನೆಯಾಗಿದೆ. ರಾಜ್ಯವು, ನಮ್ಮಲ್ಲಿ ಕಾಯ್ದೆ ಇದೆ ಎಂದು ಹೇಳಿ ಅದರ ಆಧಾರದ ಮೇಲೆ ನಾವು ಯಾರೊಬ್ಬರ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದಾಗಿದೆ ಎಂದು ಹೇಳಬಹುದು.
ಹಿಜಾಬ್ ಕುರಿತು ವಿದೇಶಿ ನ್ಯಾಯಾಲಯಗಳ ತೀರ್ಪುಗಳ ಕುರಿತು ಪೀಠದ ಪ್ರಶ್ನೆಗೆ ಕಾಮತ್ ಈಗ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ದಿಕ್ಕುಗಳಿಂದಲೂ ಜ್ಞಾನವನ್ನು ಸ್ವಾಗತಿಸಬೇಕು ಎಂಬ ಉಪನಿಷತ್ತನ್ನು (ಶ್ಲೋಕವನ್ನು ಉಲ್ಲೇಖಿಸಲಾಗಿದೆ) ನ್ಯಾಯಾಧೀಶರಾದ ದೀಕ್ಷಿತರು ಹಿಂದಿನ ದಿನ ಉಲ್ಲೇಖಿಸಿದ್ದರು.
ಈ ತೀರ್ಪುಗಳು ಧಾರ್ಮಿಕ ಆಡಳಿತದ ದೇಶಗಳಿಂದ ಬಂದವುಗಳೇ? ಎಂದು ಯಾಯಮೂರ್ತಿ ದೀಕ್ಷಿತ್ ಕೇಳುತ್ತಾರೆ. ಇಲ್ಲ ಇದು ಜಾತ್ಯತೀತ ಸಂವಿಧಾನಗಳಿಂದ ಬಂದಿದೆ ಎಂದು ಕಾಮತ್ ಉತ್ತರಿಸುತ್ತಾರೆ. ಅವರು ದಕ್ಷಿಣ ಆಫ್ರಿಕಾದ ತೀರ್ಪನ್ನು ಉಲ್ಲೇಖಿಸುತ್ತಾರೆ.
ಕಾಮತ್: ಈ ತೀರ್ಪಿನಿಂದ ತಿಳಿಯುವ ಸಂಗತಿಯೆಂದರೆ, ಧಾರ್ಮಿಕ ಆಚರಣೆಯನ್ನು ನಿಲ್ಲಿಸುವಂತೆ ಹೇಳಲು ಆ ಅಭ್ಯಾಸವು ಸಮಾಜದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿರಬೇಕು ಅಥವಾ ಅದು ಅಸಹ್ಯಕರವಾಗಿರಬೇಕು. ಹೀಗಿರುವಾಗ ತಲೆಗೆ ಸ್ಕಾರ್ಫ್ ಹಾಕಿಕೊಳ್ಳುವುದು ನಿರುಪದ್ರವಿ ಪದ್ಧತಿ. ಆರ್ಟಿಕಲ್ 25 ರ ಸಾರವೆಂದರೆ ಅದು ʼನಂಬಿಕೆಯ ಆಚರಣೆಯನ್ನು ರಕ್ಷಿಸುತ್ತದೆʼ ಆದರೆ ಕೇವಲ ಧಾರ್ಮಿಕ ಗುರುತು ಅಥವಾ ಜಿಂಗೊಯಿಸಂನ ಪ್ರದರ್ಶನವಲ್ಲ.
ಕಾಮತ್ : ನಾನು ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದಾಗ ರುದ್ರಾಕ್ಷಿ ಧರಿಸುತ್ತಿದ್ದೆ. ಅದು ನನ್ನ ಧಾರ್ಮಿಕ ಗುರುತನ್ನು ಪ್ರದರ್ಶಿಸಲು ಅಲ್ಲ. ಇದು ನಂಬಿಕೆಯ ಆಚರಣೆಯಾಗಿತ್ತು ಏಕೆಂದರೆ ಅದು ನನಗೆ ಭದ್ರತೆಯನ್ನು ನೀಡುತ್ತಿತ್ತು. ಸರುಕ್ಷತೆಯ ಭಾವ ಮೂಡಿಸುತ್ತಿತ್ತು. ಅನೇಕ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಇಂತಹ ಸಾಂಪ್ರದಾಯಿಕ ವಸ್ತುಗಳನ್ನು ಧರಿಸುವುದನ್ನು ನಾವು ನೋಡುತ್ತೇವೆ.
ಕಾಮತ್: ಈ ಅಭ್ಯಾಸವನ್ನು ಎದುರಿಸಲು, ಯಾರಾದರೂ ಶಾಲು ಧರಿಸಿದರೆ, ಅದು ಕೇವಲ ಧಾರ್ಮಿಕ ಗುರುತಿನ ಪ್ರದರ್ಶನವೇ ಅಥವಾ ಅದಕ್ಕಿಂತ ಹೆಚ್ಚಿನದ್ದೇ ಎನ್ನುವುದನ್ನು ನೀವು ತೋರಿಸಬೇಕು. ಅದನ್ನು ಹಿಂದೂ ಧರ್ಮ, ನಮ್ಮ ವೇದಗಳು ಅಥವಾ ಉಪನಿಷತ್ತುಗಳು ಅನುಮೋದಿಸಿದರೆ ಅದನ್ನು ರಕ್ಷಿಸುವುದೂ ನ್ಯಾಯಾಲಯದ ಕರ್ತವ್ಯವಾಗಿದೆ.
ಕಾಮತ್ ತೀರ್ಪಿನಿಂದ ಉಲ್ಲೇಖಿಸುತ್ತಾರೆ - "ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಗಾಗಿ ಒದಗಿಸುವ ಕಾನೂನುಗಳ ಅಸ್ತಿತ್ವ ಅಥವಾ ಗುರುತಿನಿಂದ ಧರ್ಮವನ್ನು ಸುಧಾರಿಸಲು ಶಾಸಕಾಂಗವನ್ನು ನೇಮಿಸಲು ಉದ್ದೇಶಿಸಿಲ್ಲ". ಇದು ಧರ್ಮದ ಸಾರವಾಗಿದ್ದರೆ, ಅಗತ್ಯ ಅಭ್ಯಾಸವಾಗಿದ್ದರೆ ಆರ್ಟಿಕಲ್ 25 (2) (ಎ) ಅಥವಾ (ಬಿ) ಅಡಿಯಲ್ಲಿ ಅದನ್ನು ಮೊಟಕುಗೊಳಿಸಲಾಗುವುದಿಲ್ಲ. ಇವು ಸಹಜವಾಗಿ ಸಾರ್ವಜನಿಕ ಆದೇಶ, ನೈತಿಕತೆ ಅಥವಾ ಆರೋಗ್ಯಕ್ಕೆ ಒಳಪಟ್ಟಿರುತ್ತದೆ.
ಕಾಮತ್ "ಸರ್ದಾರ್ ಸೈಯದ್ನಾ" ತೀರ್ಪನ್ನು ಓದುತ್ತಾರೆ.
ಕಾಮತ್: ರಾಜ್ಯ ಸರಕಾರದ ಅಧಿಕಾರವನ್ನು ಚಲಾಯಿಸಲು ಈ ತೀರ್ಪಿನಲ್ಲಿ ಸ್ವಲ್ಪ ಪ್ರಮಾಣದ ಮಾರ್ಗದರ್ಶನವಿದೆ. ರಾಜ್ಯವು "ಹಾನಿಕರ (ತೊಂದರೆಯಾಗುವ) ಧಾರ್ಮಿಕ ಅಭ್ಯಾಸಗಳನ್ನು" ನಿಯಂತ್ರಿಸಬಹುದು. ಇಲ್ಲಿ, ಈ ಸಂದರ್ಭದಲ್ಲಿ, ಇದು (ಹಿಜಾಬ್) ನಿರುಪದ್ರವ ಅಭ್ಯಾಸವಾಗಿದೆ. ಇದು ಯಾರಿಗೂ ತೊಂದರೆ ನೀಡುವುದಿಲ್ಲ.
ನ್ಯಾಯಮೂರ್ತಿ ದೀಕ್ಷಿತ್: ಸಜ್ಜನ್ ಸಿಂಗ್ ಪ್ರಕರಣದಲ್ಲಿ ನ್ಯಾಯಮೂರ್ತಿ ಹಿದಾಯತ್ತುಲ್ಲಾ ಅವರ ತೀರ್ಪನ್ನು ನೀವು ನೋಡಿದ್ದೀರಾ? ಅವರು "ನನಗೆ ವ್ಯಾಕರಣಕಾರನ ಪಾತ್ರವನ್ನು ಮಾಡಲು ಇಷ್ಟವಿಲ್ಲ" ಎಂದು ಹೇಳಿದ್ದರು.
ಕಾಮತ್ ಅವರು ಆರ್ಟಿಕಲ್ 25 ಅನ್ನು ಕನ್ನಡದಲ್ಲಿ ಓದುತ್ತಾರೆ. "ಸಾರ್ವಜನಿಕ ಸುವ್ಯವಸ್ಥೆ" ಅನ್ನು "ಸಾರ್ವಜನಿಕ ಆದೇಶಕ್ಕಾಗಿ" ಆ ಲೇಖನದಲ್ಲಿ ಬಳಸುವುದನ್ನು ಸೂಚಿಸುತ್ತದೆ. ಆರ್ಟಿಕಲ್ 25 (2) ನಲ್ಲಿನ "ಸುಧಾರಣೆಯು ಅಗತ್ಯವಾದ ಧಾರ್ಮಿಕ ಆಚರಣೆಗೆ ಅನ್ವಯಿಸಬಹುದೇ?" ಎಂದು ನಿನ್ನೆ ನನ್ನನ್ನು ಕೇಳಲಾಯಿತು. ಅದಕ್ಕೆ ಸುಪ್ರೀಂ ಕೋರ್ಟ್ (1962) 2 SCR 496 ಉತ್ತರಿಸಿದೆ.
ಕಾಮತ್ ಅವರು "ಸರ್ದಾರ್ ಸೈಯದುನಾ ತಾಹಿರ್" ಪ್ರಕರಣವನ್ನು ಉಲ್ಲೇಖಿಸುತ್ತಿದ್ದಾರೆ. ಇದರಲ್ಲಿ ಬೋಹ್ರಾ ಸದಸ್ಯರ ಅರ್ಜಿಗಳ ಕುರಿತು ಬಾಂಬೆ ಹೈಕೋರ್ಟ್ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಇದು ʼಅವಶ್ಯಕ ಅಭ್ಯಾಸವಾಗಿದ್ದರೆʼ, ಅದನ್ನು ಎತ್ತಿಹಿಡಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಅಡ್ವೊಕೇಟ್ ದೇವದತ್ತ್ ಕಾಮತ್ ಅವರು ಸಲ್ಲಿಕೆಗಳನ್ನು ಪ್ರಾರಂಭಿಸುತ್ತಾರೆ. ನಿನ್ನೆಯ ವಿಚಾರಣೆಯಲ್ಲಿ ವಿವಾದಾತ್ಮಕ ಸರಕಾರಿ ಆದೇಶದ ಅನುವಾದದ ಕುರಿತು ಅವರು ಸ್ಪಷ್ಟೀಕರಣ ನೀಡಲು ಬಯಸುತ್ತಾರೆ.
ಕಾಮತ್: ಸರಕಾರವು ತನ್ನ ಆದೇಶದಲ್ಲಿರುವ ʼಸಾರ್ವಜನಿಕ ಸುವ್ಯವಸ್ಥೆʼಯು ʼಸಾರ್ವಜನಿಕ ಆದೇಶʼ ಎಂದರ್ಥವಲ್ಲ. ಆದರೆ ಸಂವಿಧಾನದದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂಬ ಪದವನ್ನು ʼಸಾವರ್ಜನಿಕ ಆದೇಶʼ ಎಂದು ಉಲ್ಲೇಖಿಸಲಾಗಿದೆ. ಎಂದು ಸರಕಾರ ಈ ವಾದವನ್ನು ಮುಂದಿಟ್ಟಿರುವುದು ನನಗೆ ಅಚ್ಚರಿ ತಂದಿದೆ.
ಕಾಮತ್: ರಾಜ್ಯವು ಸಂವಿಧಾನದಲ್ಲಿ ಪದವನ್ನು ಬಳಸಿದ್ದರೆ ಪದಕ್ಕೆ ಅದೇ ಅರ್ಥವನ್ನು ನೀಡಬೇಕು. ಕನ್ನಡದಲ್ಲಿ ಸಂವಿಧಾನದ ಪ್ರಕಾರ ಸಾರ್ವಜನಿಕ ಆದೇಶ "ಸಾರ್ವಜನಿಕ ಸುವ್ಯವಸ್ಥೆ". ಕುತೂಹಲಕಾರಿ ಎಂಬಂತೆ, ಈ ಪದವನ್ನು ಸಂವಿಧಾನದಲ್ಲಿ 9 ಬಾರಿ ಬಳಸಲಾಗಿದೆ.
ಅಡ್ವೊಕೇಟ್ ಮುಹಮ್ಮದ್ ತಾಹಿರ್: ನ್ಯಾಯಾಲಯ ನೀಡಿದ ಆದೇಶವನ್ನು ರಾಜ್ಯವು ದುರುಪಯೋಗಪಡಿಸಿಕೊಂಡಿದೆ. ಮುಸ್ಲಿಂ ಹುಡುಗಿಯರು ತಮ್ಮ ಹಿಜಾಬ್ ಅನ್ನು ತೆಗೆದುಹಾಕಲು ಒತ್ತಾಯಿಸಲಾಗುತ್ತಿದೆ. ಗುಲ್ಬರ್ಗದಲ್ಲಿ ಸರ್ಕಾರಿ ಅಧಿಕಾರಿಗಳು ಉರ್ದು ಶಾಲೆಗೆ ತೆರಳಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದಾರೆ.
ತಾಹಿರ್: ಆದೇಶವನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಲ್ಲ ಮಾಧ್ಯಮ ವರದಿಗಳನ್ನೂ ಮಂಡಿಸಿದ್ದೇನೆ
ಮುಖ್ಯ ನ್ಯಾಯಮೂರ್ತಿ: ಈ ಬಗ್ಗೆ ಸೂಚನೆಗಳನ್ನು ಪಡೆಯಲು ನಾವು ಪ್ರತಿವಾದಿಗಳಿಗೆ ಕೇಳುತ್ತೇವೆ.
ಅಡ್ವೊಕೇಟ್ ಜನರಲ್ ಅಫಿಡವಿಟ್ ಅಸ್ಪಷ್ಟವಾಗಿದೆ ಎಂದು ಹೇಳುತ್ತಾರೆ.
Live updates 2: 35 pm- ಹಿಜಾಬ್ ಪ್ರಕರಣ: ತ್ರಿಸದಸ್ಯ ಪೀಠದಿಂದ ವಿಚಾರಣೆ ಆರಂಭಗೊಂಡಿದೆ.