×
Ad

ಹಿಜಾಬ್ ಕುರಿತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿ ಟ್ವೀಟ್ ಮಾಡಿದ ಬಿಜೆಪಿ ನಾಯಕ!

Update: 2022-02-15 15:52 IST

ಬೆಂಗಳೂರು: ಹಿಜಾಬ್ ಪ್ರಕರಣ ಉತ್ತರ ಪ್ರದೇಶ ಚುನಾವಣೆ ಮೇಲೆ ಪರಿಣಾಮ ಸಾಧ್ಯತೆ ಇದ್ದು,  ಹೀಗಾಗಿ ಚುನಾವಣೆ ಮುಗಿಯುವವರೆಗೆ ವಿಚಾರಣೆ ಮುಂದೂಡಿ ಎಂದು ಅರ್ಜಿದಾರರ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯರ ಮನೆ ವಿಳಾಸ, ಖಾಸಗಿ ಮಾಹಿತಿ ಟ್ವಿಟರ್ ನ್ಲಲಿ ಹಂಚಿಕೊಂಡಿರುವ  ಬಿಜೆಪಿ ನಾಯಕನ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. 

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನ ವಿಸ್ತೃತ ಪೀಠದಲ್ಲಿ ಸೋಮವಾರ ಮತ್ತೆ ಎರಡು ಅರ್ಜಿಗಳು ಸಲ್ಲಿಕೆಯಾಗಿತ್ತು. 

ಇದೇ ವಿಚಾರ  ಮುಂದಿಟ್ಟುಕೊಂಡು  ಬಿಜೆಪಿ ಕರ್ನಾಟಕ  ಟ್ವಿಟರ್ ಹ್ಯಾಂಡಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 

ನಳಿನ್ ಕುಮಾರ್ ಕಟೀಲು ಟ್ವೀಟ್ ಮಾಡಿ  'ವಿಚಾರಣೆ ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಅಪ್ರಾಪ್ತರು ಎಂದು  ಹೇಳಿಕೊಂಡಿದ್ದಲ್ಲದೆ, ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಯನ್ನೂ ಕೂಡ ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ. 

ಇದೀಗ ಬಿಜೆಪಿ ನಾಯಕರ ಈ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಟ್ವಟರ್ ನಲ್ಲಿ ಪ್ರತಿಕ್ರಿಯಿಸಿರುವ ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್‌ @BJP4Karnataka ಎಂಬ ಟ್ವಿಟರ್ ಖಾತೆಯು ಕರ್ನಾಟಕದ ಅಪ್ರಾಪ್ತ ಬಾಲಕಿಯರ ಮನೆ ವಿಳಾಸ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದೆ. ಇದು ನೀತಿಗೆ ವಿರುದ್ಧವಲ್ಲವೇ? ಎಂದು ಕರ್ನಾಟಕ ಡಿಜಿಪಿ ಹಾಗೂ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ. 

ಅಪ್ಡೇಟ್: ಇದೀಗ ವ್ಯಾಪಕ ವಿರೋಧದ ಬಳಿಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಡಿಲೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News