ಬಗರ್‌ಹುಕುಂ ರೈತರ ಪರ ಮಧು ಬಂಗಾರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

Update: 2022-02-15 16:30 GMT

ಶಿವಮೊಗ್ಗ,  ಫೆ.14: ಅರಣ್ಯ ಹಕ್ಕು ಕಾಯ್ದೆ, ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ವಿಲೇ ಮಾಡದೆ, ತಿರಸ್ಕೃತಗೊಳಿಸುತ್ತಿರುವ ಸರ್ಕಾರದ ವಿರುದ್ದ ಸೊರಬ ತಾಲೂಕಿನಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸೊರಬ ಪಟ್ಟಣ್ಣದಲ್ಲಿರುವ ಶ್ರೀ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಿದ ಮಧು ಬಂಗಾರಪ್ಪ, ಟ್ಯ್ರಾಕ್ಟರ್ ನಲ್ಲಿ ಸಾಗುವಳಿದಾರರೊಂದಿಗೆ ತಾಲೂಕು ಕಛೇರಿವರೆಗೆ ಪಾದಯಾತ್ರೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಪ್ರತಿಭಟನಾ ನಿರತ ರೈತರು, ಅರಣ್ಯ ಭೂಮಿ,ಬಗರ್ ಹುಕುಂ ಸಾಗುವಳಿದಾರರ ಅರ್ಜಿ ವಜಾಗೊಳಿಸಿ,ಭೂಮಿ ಕಸಿದುಕೊಳ್ಳುತ್ತಿರುವ  ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕೂಗಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಧುಬಂಗಾರಪ್ಪ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ.ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳಿದರು.

ರೈತರ ಪರವಾಗಿ ಹೋರಾಟ ಮಾಡಿದ್ದೇನೆ.ನಾನು ಶಾಸಕನಾದ ಅವಧಿಯಲ್ಲಿ ಸಾವಿರಾರು ರೈತರಿಗೆ ಹಕ್ಕುಪತ್ರ ನೀಡಿದ್ದೇವೆ  ಹೊರತು, ಮನೆ ಒಡೆಯುವ ಕೆಲಸ ಮಧು ಬಂಗಾರಪ್ಪ ಯಾವತ್ತೂ ಮಾಡಿಲ್ಲ, ಆದರೆ ಹಾಲಿ ಶಾಸಕರು ಹಿಂದೆ ನೀಡಿದ ಹಕ್ಕುಪತ್ರಗಳನ್ನು ವಜಾ ಮಾಡುವ ಕೆಲಸ ಮಾಡುವ ಮೂಲಕ ರೈತ ವಿರೋಧಿಯಾಗಿದೆ ನಡೆದುಕೊಂಡಿದ್ದಾರೆ ಎಂದು ಕುಮಾರ್ ಬಂಗಾರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ೨೫  ಜನ ಸಂಸದರು ಸಂಸತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸಿಲ್ಲ.ಇವರಿಗೆ ಪ್ರಧಾನಿ ಎದುರು ನಿಂತು ರೈತರ ಬಗ್ಗೆ ಮಾತನಾಡುವ ಗಂಡಸ್ತನ  ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅರಣ್ಯ ಹಾಗು  ಬಗರ್ ಹುಕುಂ ಸಾಗುವಳಿದಾರರ ಹೋರಾಟ ಅನಿವಾರ್ಯವಾಗಿದೆ.ಭೂ ಹಕ್ಕು ವಂಚಿತರಾಗುವ ಭೀತಿ ಸಾಗುವಳಿದಾರರಿಗೆ ಎದುರಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್,ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಣಪತಿ ಹುಲ್ತಿಕೊಪ್ಪ ಸೇರಿದಂತೆ ಹಲವರಿದ್ದರು.

ರೈತರಿಗೆ ನ್ಯಾಯ ಸಿಗಬೇಕಾದರೆ ಹೋರಾಟ ಮುಂದುವರೆಯಬೇಕಿದೆ.ಮಲೆನಾಡಿನಲ್ಲಿ ಭೂಹಕ್ಕಿಗಾಗಿ ರೈತರು ಇಟ್ಟಿರುವ  ಹೋರಾಟದ ಹೆಜ್ಜೆಗೆ ನಾನು ಹೆಜ್ಜೆ ಹಾಕುತ್ತೇನೆ.

ಕಾಗೋಡು ತಿಮ್ಮಪ್ಪ ,ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News