×
Ad

ಉಗ್ರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಸಿ.ಎಂ.ಇಬ್ರಾಹೀಂ

Update: 2022-02-15 23:41 IST

ಬೆಂಗಳೂರು, ಫೆ.15: ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಿಸಲು ಮುಂದಾಗಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹೀಂ ತಿಳಿಸಿದರು.

ಮಂಗಳವಾರ ನಗರದ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ವಿ.ಎಸ್.ಉಗ್ರಪ್ಪಗೆ ನೋಟಿಸ್ ಕೊಟ್ಟಿದ್ದೇನೆ. ಅಲ್ಲದೇ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದು ಹೇಳಿದರು.

ವಿ.ಎಸ್.ಉಗ್ರಪ್ಪ ಅವರು ವಕ್ಫ್ ಆಸ್ತಿ ನುಂಗಿದ್ದಾರೆ ಎಂದು ಆರೋಪ ಮಾಡಿದ್ದು, ಈ ಸಂಬಂಧ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಉಗ್ರಪ್ಪ ವಿರುದ್ಧ ಬಾರ್ ಕೌನ್ಸಿಲ್‍ಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಈ ಉಗ್ರಪ್ಪ ಎಷ್ಟು ಚುನಾವಣೆ ಗೆದ್ದಿದ್ದಾರೆ. ಒಂದು ಉಪಚುನಾವಣೆ ವಿಧವೆ ಮದುವೆ ಮಾಡಿದಂತೆ ಮಾಡಿದೆವು. ಅದು ಒಂದು ವರ್ಷದಲ್ಲಿ ಸತ್ತು ಹೋಯಿತು ಎಂದ ಅವರು, ನಾನು ಕ್ಷೇತ್ರ ರಾಜಕಾರಣ ಮಾಡಿಲ್ಲ. ರಾಜ್ಯ, ರಾಷ್ಟ್ರ ರಾಜಕಾರಣ ಮಾಡಿದ್ದೇನೆ ಎಂದು ಇಬ್ರಾಹೀಂ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News