ಫೆ.21ರವರೆಗೆ ಸದನದಲ್ಲಿ ಅಹೋರಾತ್ರಿ ಧರಣಿ: ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

Update: 2022-02-18 13:08 GMT

ಬೆಂಗಳೂರು, ಫೆ.18: ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಫೆ.17ರ ಸಂಜೆಯಿಂದ ಆರಂಭಿಸಲಾಗಿರುವ ಅಹೋರಾತ್ರಿ ಧರಣಿ ಮುಷ್ಕರವನ್ನು ಫೆ.21ರ ಸೋಮವಾರ ರಾತ್ರಿವರೆಗೆ ಮುಂದುವರಿಸಲು ವಿರೋಧ ಪಕ್ಷದ ನಾಯಕರು ನಿರ್ದೇಶಿಸಿದ್ದಾರೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ.

ಆದುದರಿಂದ ಎಲ್ಲ ಕಾಂಗ್ರೆಸ್ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಿ ಕಡ್ಡಾಯವಾಗಿ ಅಹೋರಾತ್ರಿ ಧರಣಿಯಲ್ಲಿ ತಪ್ಪದೇ ಭಾಗವಹಿಸಿ ಸದನದಲ್ಲಿ ಹಾಜರಿರಬೇಕೆಂದು ಅವರು ವಿಪ್ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News