×
Ad

ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಅಯೂಬ್ ಖಾನ್ ಜಾಮೀನು ಅರ್ಜಿ ವಜಾ

Update: 2022-02-18 22:41 IST
 ಅಯೂಬ್ ಖಾನ್

ಮೈಸೂರು,ಫೆ.18: ಶ್ರವಣ ಬೆಳಗೊಳದ ಭಗವಾನ್ ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ  ಬಂಧನಕ್ಕೊಳಗಾಗಿದ್ದ ಅಯೂಬ್ ಖಾನ್ ಜಾಮೀನು ಅರ್ಜಿ ವಜಾ ಆಗಿದೆ.

 ಮೈಸೂರಿನ 2ನೇ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಶೈಲಶ್ರೀ ಅವರು ಜಾಮೀನು ಅರ್ಜಿ ವಜಾ ಮಾಡಿದ್ದಾರೆ. ಬಾಹುಬಲಿ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನ್ಯೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅರೋಪಿಯನ್ನು  ಉದಯಗಿರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಫೆ 25ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದೀಗ ಜಾಮೀನು ಅರ್ಜಿ ವಜಾ ಹಿನ್ನೆಲೆ ಅಯೂಬ್ ಖಾನ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕ ನಾಗರಾಜ್ ಮತ್ತು ಹಿರಿಯ ವಕೀಲರಾದ ಆರ್ ಗಿರಿಜೇಶ್ ವಾದ ಮಂಡನೆ ಮಾಡಿದ್ದರು.

 ಇಬ್ಬರ ವಾದ ಪುರಸ್ಕರಿಸಿದ ನ್ಯಾಯಾಧೀಶರಾದ ಶೈಲಶ್ರೀ ಅವರು ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News