×
Ad

ಸುವರ್ಣ ನ್ಯೂಸ್‌ ನವರು ತಮ್ಮ ಮೇರೆ ಮೀರಿ, ನಮ್ಮ ಮನೆಯೊಳಗೆ ನುಗ್ಗಿ ಕಿರುಕುಳ ನೀಡಿದರು: ಹಿಜಾಬ್‌ ಪರ ವಿದ್ಯಾರ್ಥಿನಿ

Update: 2022-02-20 13:59 IST

ಉಡುಪಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಅನ್ನು ನಿಷೇಧಿಸುವ ಕುರಿತು ಕರ್ನಾಟಕ ಹೈಕೋರ್ಟ್‌ ಗೆ ಅರ್ಜಿ ಹಾಕಿದ್ದ ವಿದ್ಯಾರ್ಥಿನಿಯರಲ್ಲೊಬ್ಬರಾದ ಆಲಿಯಾ ಅಸ್ಸಾದಿ, "ಮಾಧ್ಯಮಗಳು ನಮ್ಮ ಮನೆಯೊಳಗೆ ನುಗ್ಗಿ ಕಿರುಕುಳ ನೀಡುತ್ತಿವೆ" ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ.

"ಹೆಚ್ಚಿನ ಮಾಧ್ಯಮಗಳು ತಮ್ಮ ಮಾಧ್ಯಮ ಧರ್ಮವನ್ನೇ ಮರೆತಿರುವುದನ್ನು ಈಗ ನಾನು ಕಾಣುತ್ತಿದ್ದೇನೆ. ಹಿಡನ್‌ ಕ್ಯಾಮರಾಗಳನ್ನು ಹಿಡಿದುಕೊಂಡು ಅವರು ನಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸಿದ್ದಾರೆ. ಈ ಮೂಲಕ ಕನ್ನಡದ ಏಶ್ಯನೇಟ್‌ ಸುವರ್ಣ ನ್ಯೂಸ್‌ ಎಂಬ ಚಾನೆಲ್‌ ತನ್ನ ಮಿತಿಯನ್ನು ಮೀರಿದೆ ಎಂದು ಉಡುಪಿ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಟ್ವೀಟ್‌ ಮಾಡಿದ್ದಾರೆ.

ಮಾಧ್ಯಮದಲ್ಲಿರುವವರು ʼಖಾಸಗಿತನʼ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ತನ್ನನ್ನು ಹಿಂಸಿಸುತ್ತಿರುವ ಮಾಧ್ಯಮಗಳ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಕರ್ನಾಟಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆಗ್ರಹಿಸಿದ್ದಾರೆ.

"ನಮ್ಮ ವಿದ್ಯಾಸಂಸ್ಥೆಯು ನಮ್ಮ ಖಾಸಗಿ ಫೋನ್‌ ನಂಬರ್‌ ಗಳನ್ನು ಹಾಗೂ ನಮ್ಮ ಖಾಸಗಿ ಮಾಹಿತಿಗಳನ್ನು ಲೀಕ್‌ ಮಾಡಿದ ಬಳಿಕ ನಮಗೆ ಹಲವಾರು ನಿಂದನಾತ್ಮಕ ಮತ್ತು ಬೆದರಿಕೆ ಕರೆಗಳು ಬರಲು ಆರಂಭವಾಗಿದೆ. ಆದರೆ ಇದೀಗ ಅವರು ನಮ್ಮ ಮನೆಯೊಳಗೆ ನುಗ್ಗಲೂ ಪ್ರಾರಂಭಿಸಿದ್ದಾರೆ ಮತ್ತು ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಯಾವೆಲ್ಲಾ ಮಾರ್ಗಗಳಲ್ಲಿ ಧಮನಿಸಲು ಸಾಧ್ಯವಾಗುತ್ತದೆ ಎಂದು ಅವರು ನೋಡುತ್ತಿದ್ದಾರೆ. ಇಂತಹಾ ಕೀಳುಮಟ್ಟದ ಕೆಲಸವನ್ನು ನಿಲ್ಲಿ ಜಂಟಲ್‌ಮ್ಯಾನ್‌ ಆಗಲು ಪ್ರಯತ್ನಿಸಿ" ಎಂದು ಅವರು ಹೇಳಿದ್ದಾರೆ.

ಪ್ರತಿಭಟನಾನಿರತ ವಿದ್ಯಾರ್ಥಿನಿಯರ ವಿಳಾಸಗಳು, ಮೊಬೈಲ್‌ ಸಂಖ್ಯೆಗಳನ್ನು ಕಳೆದ ವಾರ ಕಾಲೇಜಿನಿಂದ ಸೋರಿಕೆ ಮಾಡಲಾಗಿತ್ತು ಎಂದು ಆಲಿಯಾ ಆರೋಪಿಸಿದ್ದಾರೆ ಅವರ ವೈಯಕ್ತಿಕ ಫೋನ್‌ ನಂಬರ್‌ ಗಳು, ಪೋಷಕರ ಹೆಸರುಗಳು ಹಾಗೂ ಮನೆಯ ವಿಳಾಸ ಸೇರಿದಂತೆ ಹಲವು ವಿವರಗಳನ್ನು ಉಡುಪಿಯ ಬಲಪಂಥೀಯ ವಾಟ್ಸಪ್‌ ಗುಂಪುಗಳಲ್ಲಿ ಶೇರ್‌ ಮಾಡಲಾಗಿತ್ತು. ಇದು ಮಾತ್ರವಲ್ಲದೇ ಕರ್ನಾಟಕ ಬಿಜೆಪಿ ಕೂಡಾ ಇವರೆಲ್ಲರ ವಿಳಾಸಗಳನ್ನು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿತ್ತು.

ಇದೀಗ ಸುವರ್ನ ನ್ಯೂಸ್‌, ಉಡುಪಿಯಲ್ಲಿ ʼತಮಗೆ ಹಿಜಾಬ್‌ ಧರಿಸಲು ಅನುಮತಿ ನೀಡಿʼ ಎಂದು ಮಾತ್ರ ಬೇಡಿಕೆಯಿಟ್ಟಿದ್ದ ಬಾಲಕಿಯರ ಹಿಂದೆ ಐಸಿಸ್‌ ಎಂಬ ಅಂತಾರಾಷ್ಟ್ರೀ ಉಗ್ರಗಾಮಿ ಸಂಘಟನೆಯ ಕೈವಾಡವಿದೆ ಎಂಬ ಸುದ್ದಿ ಪ್ರಕಟಿಸಿ ಸಾರ್ವಜನಿಕರ ಆಕ್ರೋಶಕ್ಕೆ ಪಾತ್ರವಾಗಿದ್ದು ಮಾತ್ರಲ್ಲ, ನಗೆಪಾಟಲಿಗೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News