×
Ad

ಚಿಕ್ಕಬಳ್ಳಾಪುರ: ಬ್ರಹ್ಮಗಿರಿ ಬೆಟ್ಟದಲ್ಲಿ ಚಾರಣ ಮಾಡುವಾಗ ಕಾಲು ಜಾರಿ ಬಿದ್ದ ಯುವಕ; ವಾಯುಪಡೆಯಿಂದ ರಕ್ಷಣೆ

Update: 2022-02-20 19:18 IST

ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಬಂದಿದ್ದ ಯುವಕನೊಬ್ಬ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಆಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

ಅಪಾಯಕ್ಕೆ ಸಿಲುಕಿದ ಯುವಕನನ್ನು ದೆಹಲಿ ಮೂಲದ ನಿಶಾಂಕ್ ಎಂದು ಗುರುತಿಸಲಾಗಿದೆ. 

ವಾರಾಂತ್ಯದ ಕಾರಣ ನಂದಿಬೆಟ್ಟ  ಬಂದ್ ಆಗಿದ್ದರಿಂದ  ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ನಿಶಾಂತ್ ಮತ್ತು ಆತನ ಸ್ನೇಹಿತರು ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ  ನಿಶಾಂತ್ ಕಾಲು ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ. 

ಬಳಿಕ ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಆಗ್ನಿಶಾಮಕದಳ ಸಿಬ್ಬಂದಿ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಇರುವ ಬಗ್ಗೆ ಪತ್ತೆ ಹಚ್ಚಿದ್ದಾರೆ. 

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿ ಬಳಿಕ  ಬೆಂಗಳೂರಿನ ಯಲಹಂಕದಿಂದ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದ್ದು, ಯುವಕ ಸುರಕ್ಷಿತನಾಗಿದ್ದಾನೆ  ಎಂದು ಚಿಕ್ಕಬಳ್ಳಾಪುರ ಎಸ್.​ಪಿ ಜಿ.ಕೆ ಮಿಥುನ್ ಕುಮಾರ್  ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News