ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿಗೆ ಫಾತಿಮಾ ಶೇಖ್ ಕೃತಿ ಆಯ್ಕೆ
Update: 2022-02-20 20:24 IST
ಬೆಂಗಳೂರು, ಫೆ.20: ಬರಹಗಾರ ಕಾ.ಹು.ಚಾನ್ ಪಾಷ ಅನುವಾದಿಸಿರುವ ‘ಫಾತಿಮಾ ಶೇಖ್: ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಕೃತಿಗೆ ಚುಟುಕು ಸಾಹಿತ್ಯ ಪರಿಷತ್ತು ನೀಡುವ 2021ನೇ ಸಾಲಿನ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ’ ಲಭಿಸಿದೆ. ಪ್ರಶಸ್ತಿಯು 5 ಸಾವಿರ ರೂ., ಪ್ರಶಸ್ತಿಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ಒಳಗೊಂಡಿದೆ. ಫೆ.27ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
‘ಫಾತಿಮಾ ಶೇಖ್: ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಎಂಬ ಕನ್ನಡದ ಅನುವಾದಿತ ಕೃತಿಯನ್ನು ಹಿರಿಯ ಸಾಹಿತಿ ಸೈಯದ್ ನಸೀರ್ ಅಹಮ್ಮದ್ ತೆಲುಗು ಭಾಷೆಯಲ್ಲಿ ಬರೆದಿದ್ದು, ಕಾ.ಹು.ಚಾನ್ ಪಾಷ ಅನುವಾದಿಸಿದ್ದಾರೆ.