'ಕೇಸರಿ ಬಾವುಟ ಹಾರಿಸುತ್ತೇವೆ ಎನ್ನುವುದು ರಾಷ್ಟ್ರದ್ರೋಹದ ಕೃತ್ಯ': ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ

Update: 2022-02-20 15:55 GMT

ಮೈಸೂರು,ಫೆ.20: ಧಾರ್ಮಿಕ ವಸ್ತ್ರದ ಹೆಸರಿನಲ್ಲಿ ಮತ ಬ್ಯಾಂಕ್ ಮಾಡಿಕೊಳ್ಳಲು ವಲಸು ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ. ಹಿಜಾಬ್ ಮತ್ತು ಕೇಸರಿ ರಾಜಕೀಯ ಷಡ್ಯಂತರ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಿಡಿಕಾರಿದರು.

ಈ ಸಂಬಂಧ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಕ್ಕಿಂತ ದೇಶ ಮುಖ್ಯ, ದೇಶ ಇಲ್ಲ ಎಂದರೆ ಧರ್ಮ ಎಲ್ಲಿಂದ ಬರುತ್ತದೆ. ಹಿಜಾಬ್, ಕೇಸರಿ ಮತ್ತು ಮನುವಾದದ ತತ್ವಗಳು ದೇಶದ ಐಕ್ಯತೆಗೆ ಅಪಾಯ, ಇದನ್ನು ನೆಪ ಮಾಡಿಕೊಂಡು ಕೆಂಪು ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂಬುದು ರಾಷ್ಟ್ರ ದ್ರೋಹದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮದ ಹೆಸರಿನಲ್ಲಿ ದೇಶ ಹೊಡೆಯಲು ಮುಂದಾಗಿದ್ದಾರೆ. ಮನುಷ್ಯನಿಗಾಗಿ ಧರ್ಮ ಇರಬೇಕು ಹೊರತು ಧರ್ಮಕ್ಕಾಗಿ ಮನುಷ್ಯ ಇರಬಾರದು. ಧರ್ಮಕ್ಕಿಂತ ದೇಶ ಮುಖ್ಯ, ದೇಶ ಇಲ್ಲ ಎಂದರೆ ಧರ್ಮ ಎಲ್ಲಿಂದ ಬರುತ್ತದೆ. ಹಾಗಾಗಿ ಧರ್ಮಾತೀತ ದೇಶ ಅಪಾಯಕಾರಿ ಎಂದು ಹೇಳಿದರು.

ದೇಶದ ಅಖಂಡತೆಗೆ ಅಪಾಯ ತಂದೊಡ್ಡುವ ಕೆಲಸವಾಗುತ್ತಿದೆ. ಮನುವಾದದ ತತ್ವಗಳು ದೇಶದ ಐಕ್ಯತೆಗೆ ಅಪಾಯ,  ಯಾವುದೋ ಒಂದು ಕೋಮನ್ನು ಗುರಿಯಾಗಿಸಿಕೊಂಡು ಮತ ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಪ್ರಜೆಗಳು ಎಚ್ಚೆತ್ತುಕೊಂಡು ಬುದ್ಧಿ ಕಲಿಸಬೇಕಿದೆ ಎಂದರು.

ಹಿಜಾಬ್, ಅಂಬೇಡ್ಕರ್ ಗೆ ಅವಮಾನ ಮಾಡಿ ಮತ ಬ್ಯಾಂಕ್ ಮಾಡಿಕೊಳ್ಳಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ದೇಶ, ನಮಗೆ ಪ್ರಜಾಪ್ರಭುತ್ವ ಸಂವಿಧಾನ ಮುಖ್ಯ ಅದಕ್ಕೆ ಅಪಾಯ ತಂದರೆ ಸುಮ್ಮನಿರಲು ಸಾಧ್ಯವಿಲ್ಲ, ಹಾಗಾಗಿ ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. 

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಅಧಿಕಾರಿಗಳು ಸೋಮವಾರ ಸಭೆ ನಡೆಸಲಿದ್ದಾರೆ. ಅಂತಿಮವಾಗಿ ಮಲ್ಲಿಕಾರ್ಜನ ಗೌಡರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಗ್ಯಾರೆಂಟಿ.

-ಜ್ಞಾನಪ್ರಕಾಶ್ ಸ್ವಾಮೀಜಿ, ಮೈಸೂರು ಉರಿಲಿಂಗಿ ಪೆದ್ದಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News