×
Ad

'ಕೇಂದ್ರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ': ದಿನೇಶ್ ಗುಂಡೂರಾವ್

Update: 2022-02-21 11:11 IST

ಬೆಂಗಳೂರು: ಕೇಂದ್ರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಈ ಬಾರಿ ತೆರಿಗೆ ವರಮಾನ ಹಂಚಿಕೆಯಲ್ಲಿ  ರಾಜ್ಯಕ್ಕೆ 7,850 ಕೋಟಿ ರೂ. ಕೊರತೆ ಇರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಅತ್ತ ಜಿಎಸ್ಟಿ ಪರಿಹಾರ ಹಣದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ದ್ರೋಹ ಮಾಡುವುದೇ  ಡಬಲ್ ಇಂಜೀನ್ ಸರ್ಕಾರದ ಸಾಧನೆಯೆ? ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ವಾಗ್ದಾಳಿ ನಡೆಸಿದ್ದಾರೆ. . 

ಈ ಕುರಿತು ಸೋಮವಾರ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು,  15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾಗಿದ್ದ 5 ಸಾವಿರ ಕೋಟಿ ಅನುಧಾನಕ್ಕೂ ಸಚಿವೆ ನಿರ್ಮಲಾ ಸೀತಾರಾಮನ್ ಕೊಕ್ಕೆ ಹಾಕಿದ್ದರು. ಈಗ ತೆರಿಗೆ ವರಮಾನ ಹಂಚಿಕೆಯಲ್ಲೂ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಕ್ಕಿಲ್ಲ.ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಒಂದು ರೀತಿ‌ ಮನೆಗೆ ಮಾರಿ,ಊರಿಗೆ ಉಪಕಾರಿ ಇದ್ದಂತೆ ಎಂದು ಹೇಳಿದ್ದಾರೆ. 

ಉಪಕಾರ ಸ್ಮರಣೆಯಿಲ್ಲದ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ನಿರಂತರ ದ್ರೋಹ ಎಸಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾಗಿರೋ 25 ಬಿಜೆಪಿ ಸಂಸದರಿಗೆ ದ್ರೋಹ ಪ್ರಶ್ನಿಸದಷ್ಟು ನಾಲಗೆ ಬಿದ್ದು ಹೋಗಿದೆ. ಡಬಲ್ ಎಂಜೀನ್ ಸರ್ಕಾರದಿಂದ ಸ್ವರ್ಗ ಸೃಷ್ಟಿಯಾಗಲಿದೆ ಎಂದು ಬಿಜೆಪಿಯವರು ಬಾಯಿ ಬಡಿದುಕೊಂಡಿದ್ದರು.  ಬಿಜೆಪಿಯವರ ಪ್ರಕಾರ ಸ್ವರ್ಗ ಯಾವುದು? ಎಂದು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News