‘'ಶಿವಮೊಗ್ಗದ ಯುವಕನ ಕೊಲೆಗೆ ಪರೋಕ್ಷವಾಗಿ ಈಶ್ವರಪ್ಪ ಅವರೇ ಕಾರಣ'': ಬಿ.ಕೆ ಹರಿಪ್ರಸಾದ್

Update: 2022-02-21 09:36 GMT

ಬೆಂಗಳೂರು: 'ಈಶ್ವರಪ್ಪ ಅವರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ  ಒತ್ತಾಯಿಸಿ ನಾವು ಈಗಾಗಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಇದರಿಂದ ತಪ್ಪಿಸಿಕೊಳ್ಳಲು ಅವರೇ ಈ ಕೃತ್ಯವನ್ನು ಮಾಡಿರಬೇಕು' ಎಂದು ವಿಧಾನ ಪರಿಷತ್ ವಿಪಕ್ಷ ನಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತನ ಅಂತಿಮ ಯಾತ್ರೆ ವೇಳೆ ಕಲ್ಲು ತೂರಾಟ: ಇಬ್ಬರು ಪತ್ರಕರ್ತರಿಗೆ ಗಾಯ

ಈ ಕುರಿತು ವಿಧಾನಸೌಧ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಎಲ್ಲ ಹಲ್ಲೆಗಳು, ಕೊಲೆಗಳ ಮೇಲೆ ಮುಸ್ಲಿಮರ ಮೇಲೆ ಆರೋಪ ಮಾಡುವುದು ಬಿಜೆಪಿಯವರದ್ದು ಒಂದು ಪ್ಯಾಷನ್ ಆಗಿದೆ. ಈ ಹಿಂದೆಯೂ  ಶಿವಮೊಗ್ಗದಲ್ಲಿ ಹತ್ಯೆ ಘಟನೆ ನಡೆದಾಗ ಅದು ಅಲ್ಪಸಂಖ್ಯಾತರು ಮಾಡಿದ್ದು ಅಂತ ಹೇಳಿಕೆ ಕೊಟ್ಟಿದ್ದರು. ಬಳಿಕ ಕೋರ್ಟ್ ತೀರ್ಮಾನ ಆದ ಮೇಲೆ  ಆ ಸಮುದಾಯದವರಲ್ಲ, ಬೇರೆ ಸಮುದಾಯದವರು ಅಂತ ಗೊತ್ತಾಯಿತು. ಆದ್ದರಿಂದ ಈಶ್ವರಪ್ಪನವರು ತಾನು ಕೊಡಬೇಕಾದ ರಾಜೀನಾಮೆಯಿಂದ ತಪ್ಪಿಸಿಕೊಳ್ಳೋದಕ್ಕೆ ಅವರೇ ಈ ಕೃತ್ಯ ಮಾಡಿಸಿರಬಹುದು ಅಂತ ಎಲ್ಲರಿಗೂ ಶಂಕೆ ಇದೆ. ಈ ಕೊಲೆಗೆ ಪರೋಕ್ಷವಾಗಿ ಈಶ್ವರಪ್ಪನವರೇ ಕಾರಣ ಅಂತ ನಾನು ನೇರವಾಗಿ ಆರೋಪ ಮಾಡ್ತೇನೆ ಎಂದು ಹೇಳಿದ್ದಾರೆ. 

ಗೃಹ ಸಚಿವರು, ಈಶ್ವರಪ್ಪ ಇರುವ ಜಿಲ್ಲೆಯಲ್ಲೇ ಹತ್ಯೆಯಾಗಿದೆ. ಇವರ ವೈಫಲ್ಯಗಳಿಂದಲೇ ಕೊಲೆಗಳಾಗುತ್ತಿದೆ ಎಂದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News