ಬಜರಂಗದಳ ಕಾರ್ಯಕರ್ತನ ಅಂತಿಮ ಯಾತ್ರೆ ವೇಳೆ ಕಲ್ಲು ತೂರಾಟ: ಇಬ್ಬರು ಪತ್ರಕರ್ತರಿಗೆ ಗಾಯ

Update: 2022-02-21 18:51 GMT

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಹತ್ಯೆ ಘಟನೆ ಬಳಿಕ ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಅಂತಿಮ ಯಾತ್ರೆ ವೇಳೆ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ ಇಬ್ಬರು ಪತ್ರಕರ್ತರು ಗಾಯಗೊಂಡಿರುವ ಘಟನೆ ನಡೆದಿದೆ. 

ರವಿವಾರ ರಾತ್ರಿ ನಗರದ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತಿ ಕಾಲೋನಿ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಮೃತ ಯುವಕನ ಅಂತಿಮ ಯಾತ್ರೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು ಕೆಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟದಿಂದ ಫೋಟೊ ಜರ್ನಲಿಸ್ಟ್ ಲಿಂಗನ್ ಗೌಡ ಹಾಗೂ ಮುಹಮ್ಮದ್ ರಫೀ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಗಾಂಧಿ ಬಜಾರ್ ರಸ್ತೆಯಲ್ಲಿ  ಪತ್ರಕರ್ತ ಬಿ. ರೇಣುಕೇಶ್ ರವರ ಕ್ಯಾಮರಾ ಹಾಗೂ ಚಂದ್ರಹಾಸ್ ಹಿರೇಮಳಲಿರವರ ಮೊಬೈಲ್ ಕಿತ್ತುಕೊಳ್ಳಲು ಕೆಲ ಕಿಡಿಗೇಡಿಗಳು ಯತ್ನಿಸಿದರು. ಕ್ಯಾಮರಾ ಲೆನ್ಸ್  ಹಾಳುಗೆಡವಿ, ಫೋಟೋ-ವಿಡಿಯೋ ತೆಗೆದರೆ ಹಲ್ಲೆ ನಡೆಸುವ ಬೆದರಿಕೆ ಹಾಕಿದರು. ಸ್ಥಳದಲ್ಲಿದ್ದ ಪೊಲೀಸರು, ಇದೆಲ್ಲವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News