×
Ad

ಶಿವಮೊಗ್ಗ: ಕಿಡಿಗೇಡಿಗಳಿಂದ 3 ವಾಹನಗಳಿಗೆ ಬೆಂಕಿ

Update: 2022-02-22 13:12 IST

ಶಿವಮೊಗ್ಗ:, ಫೆ.22: ನಿಷೇಧಾಜ್ಞೆಯ ನಡುವೆಯೇ ಗೋಪಾಳದ ಕೊರಮ ಕೇರಿ ಮತ್ತು ಟಿಪ್ಪುನಗರದ 6ನೇ ತಿರುವಿನಲ್ಲಿ ಕಿಡಿಗೇಡಿಗಳು ಮೂರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಎರಡು ಆಟೋ ರಿಕ್ಷಾ, ಒಂದು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಕೊರಮರ ಕೇರಿಯಲ್ಲಿ ಗೊಬ್ಬರ ಇಳಿಸುವ ಕೆಲಸ ಮಾಡಿಕೊಂಡಿದ್ದವರಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಇಂದು ಬೆಳಗ್ಗಿನ ಜಾವ 5:30ರ ವೇಳೆಗೆ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ ಮೇಲಿನ ತುಂಗಾನಗರದಲ್ಲಿ ಆಟೋ ರಿಕ್ಷಾಗಳಿಗೂ ಬೆಂಕಿ‌ಹಚ್ಚಿದ್ದಾರೆ.ಇದರಿಂದ ಆಟೋ ಸುಟ್ಟು ಕರಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News