ಅಂಬೇಡ್ಕರ್ ಗೆ ಅಗೌರವ ಆರೋಪ: ಗುತ್ತೂರು ಗ್ರಾಪಂ ಪಿಡಿಒ ಅಮಾನತು

Update: 2022-02-23 18:23 GMT

ಹರಿಹರ: ತಾಲೂಕಿನ ಗುತ್ತೂರು ಗ್ರಾಪಂಯಲ್ಲಿ ಜ.26 ರಂದು ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನಿಡದೆ ಅವಮಾನವೆಸಗಿದ್ದ ಪ್ರಕರಣದಲ್ಲಿ ಪಿಡಿಒ ವಿಜಯಲಕ್ಷ್ಮಿ ಎನ್. ಅವರನ್ನು ಅಮಾನತ್ತುಗೊಳಿಸಿ ಜಿಪಂ ಸಿಇಓ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಆದೇಶಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲ್ಲೂಕು ಸಮಿತಿಯಿಂದ ಈ ಹಿಂದೆ ಜಿಪಂ ಸಿಇಒ, ತಾಪಂ ಇಒ, ನಾಗರೀಕ ಹಕ್ಕು ನಿರ್ದೇಶನಾಲಯ ಮತ್ತು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದರು.

ಸಮಾಜ ಕಲ್ಯಾಣ ಇಲಾಖೆ, ತಾಪಂ ಇಒ ಇವರ ವರದಿಯನ್ನಾಧರಿಸಿ ಜಿಪಂ ಸಿಇಒ ರವರು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಗಳು 1957 ರ ನಿಯಮಗಳಡಿ ವಿಚಾರಣೆ ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಪಿಡಿಒ ಇವರನ್ನು ಅಮಾನತ್ತು ಪಡಿಸಿದ್ದಾರೆ.

ಗುತ್ತೂರು ಪಿಡಿಒ ಇವರನ್ನು ಕೊನೆಗೂ ಅಮಾನತ್ತು ಪಡಿಸಿರುವುದು ಕಾರ್ಯಕರ್ತರ ಹೋರಾಟಕ್ಕೆ ಸಂದ ಜಯ ಎಂದು ದಸಂಸ ಹರ್ಷ ವ್ಯಕ್ತಪಡಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News