×
Ad

ಹರ್ಷ ಮನೆಗೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಬಂದಿಲ್ಲ: ಶಾಸಕ ಯತ್ನಾಳ್

Update: 2022-02-24 13:54 IST

ಶಿವಮೊಗ್ಗ, ಫೆ.24:   ಒಬ್ಬ ಮುಸ್ಲಿಂ ಮೃತಪಟ್ಟಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೂ ಬರುತ್ತಿದ್ದರು. ಆದರೆ ಹರ್ಷ ಮನೆಗೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಬಂದಿಲ್ಲ. ಹಿಂದೂಗಳನ್ನು ವಿರೋಧಿಸಿದ್ದಕ್ಕೆ ಕಾಂಗ್ರೆಸ್ ಹಾಳಾಗಿದೆ. ಆದರೂ ಕಾಂಗ್ರೆಸ್ ಗೆ ಪಾಠ ಬಂದಿಲ್ಲ‌ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.

ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ಎಂದೆಂದಿಗೂ ನಾವಿರುತ್ತೇವೆ ಎಂದು ನಾಯಕರು ಅಭಯ ನೀಡಿದರು. 

ಹಿಂದೂ ಕಾರ್ಯಕರ್ತ ಹರ್ಷನನ್ನು ದಾರುಣವಾಗಿ‌ ಕೊಲೆ ಮಾಡಿದ್ದಾರೆ. ಹಿಂದೂ ಯುವಕರ ಕೊಲೆಗೆ ಅಂತ್ಯ ಹಾಡಬೇಕಿದೆ. ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಈ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದಲ್ಲಿ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News