×
Ad

ಚಾಕುವಿನಿಂದ ವ್ಯಕ್ತಿಯ ಮೇಲೆ ಹಲ್ಲೆ: ಆರೋಪಿಗೆ 2 ವರ್ಷ ಜೈಲು ಶಿಕ್ಷೆ

Update: 2022-02-24 18:56 IST

ಕಲಬುರಗಿ, ಫೆ.24: ಹಳೆಯ ವೈಷಮ್ಯದಿಂದ ಹಲ್ಲೆ ನಡೆಸಿದ ಆರೋಪ ಸಾಬೀತಾಗಿದ್ದರಿಂದ ಪ್ರಿಯದರ್ಶನ ಗಾಯಕವಾಡ ಎಂಬಾತನಿಗೆ ಕಲಬುರಗಿ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಸಾದಾ ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿದೆ.

2020ರ ಸಪ್ಟೆಂಬರ್ 7ರಂದು ರಾತ್ರಿ ವೇಳೆಯಲ್ಲಿ ವಿಶಾಲ ದತ್ತು ಮೂಕಿ ಎಂಬಾತ ತನ್ನ ಅಂಗಡಿಯಿಂದ ಮನೆಗೆ ಬರುತ್ತಿರುವಾಗ ಅವನ ಮೇಲೆ ಪ್ರಿಯದರ್ಶನ ಗಾಯಕವಾಡ ಚಾಕುವಿನಿಂದ ದಾಳಿ ನಡೆಸಿದ್ದ. ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲಾಗಿತ್ತು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ ವ್ಹಿ.ಎನ್ ಅವರು ಸಾಕ್ಷಿ ಆಧಾರಗಳನ್ನು ಪರಾಮರ್ಶಿಸಿ ತೀರ್ಪು ನೀಡಿದ್ದಾರೆ. ಗಾಯಾಳು ವಿಶಾಲನಿಗೆ 10 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. 3ನೆ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News