×
Ad

ಉಕ್ರೇನ್‌ ನಲ್ಲಿ ಸಿಲುಕಿದ ಕಲಬುರಗಿಯ ವಿದ್ಯಾರ್ಥಿನಿ

Update: 2022-02-24 19:03 IST
ವಿದ್ಯಾರ್ಥಿನಿ  ಜೀವಿತಾ 

ಕಲಬುರಗಿ: ಉಕ್ರೇನ್‌ - ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿದ್ದು, ಉಕ್ರೇನ್‌ನ ಕಿವ್‌ ನಗರದಲ್ಲಿ ಕಲಬುರಗಿ ನಗರದ ವಿದ್ಯಾರ್ಥಿನಿಯೋರ್ವಳು ಸಿಲುಕಿದ್ದಾರೆ. 

ಗುಲ್ಬರ್ಗಾ ವಿಶ್ವವಿದ್ಯಾಲಯ ಬಯೋ ಕಮಿಸ್ಟ್ರಿ ವಿಭಾಗದ ಪ್ರಾಧ್ಯಪಕಿ ಲಲಿತಾ ಜೊನ್ನ ಎಂಬುವರ ಮಗಳು ಜೀವಿತಾ ಉಕ್ರೇನ್‌ನ ಕಿವ್‌ ನಗರದಲ್ಲಿ ಎಮ್‌ಬಿಬಿಎಸ್‌ ಏಳನೇ ಸೆಮಿಸ್ಟರ್‌ ಮಾಡ್ತಿದ್ದು  ತಾಯಿ ಜೊತೆ ಜೀವಿತಾ ವಿಡಿಯೋ ಕಾಲ್‌ ಮಾಡಿ ಮಾತನಾಡಿ ಸುರಕ್ಷಿತವಾಗಿರವುದಾಗಿ ತಿಳಿಸಿದ್ದಾರೆ. 

ನಾನು ಸುರಕ್ಷತೆಯಿಂದ ಇದ್ದು, ಆತಂಕ ಪಡುವ ಅಗತ್ಯ ಇಲ್ಲ ಅಂತಾ ತಾಯಿಗೆ ಜೀವಿತಾ ಹೇಳಿದ್ದಾಳೆ.

ಇನ್ನೂ ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಸಹಜವಾಗಿ ಜೀವಿತಾಳ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿದ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News