ರಶ್ಯ ಆಕ್ರಮಣ: ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮ

Update: 2022-02-25 07:22 GMT

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀ.ಗೆ ಅನುಕ್ರಮವಾಗಿ 95.3 ರೂ. ಮತ್ತು 86.7 ರೂ.ಗಳಾಗಿವೆ. ನವೆಂಬರ್‌ನಲ್ಲಿ ತೆರಿಗೆ ಕಡಿತಗಳ ಬಳಿಕ ತೈಲ ಮಾರಾಟ ಕಂಪನಿಗಳು ದರಗಳನ್ನು ಪರಿಷ್ಕರಿಸಿಲ್ಲ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ನವೆಂಬರ್ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ.ಗೆ 84.7 ಡಾ.ಇದ್ದ ಕಚ್ಚಾತೈಲ ಬೆಲೆ ಡಿಸೆಂಬರ್ ಆರಂಭದಲ್ಲಿ 70 ಡಾ.ಗೂ ಕೆಳಗಿಳಿದಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಚ್ಚಾತೈಲ ಬೆಲೆಗಳ ಕುಸಿತದ ಲಾಭ ಗ್ರಾಹಕರಿಗೆ ದಕ್ಕಿರದಿದ್ದರೂ ಈಗ ಹೆಚ್ಚಿನ ಕಚ್ಚಾತೈಲ ಬೆಲೆಗಳು ಅವರ ಪಾಲಿಗೆ ಇಂಧನ ದರಗಳನ್ನು ಇನ್ನಷ್ಟು ಹೊರೆಯಾಗಿಸಲಿವೆ.

ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನಿನ ಡಾನ್‌ಬಾಸ್ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ ಬಳಿಕ ಸೆಪ್ಟಂಬರ್,2014ರಿಂದೀಚೆಗೆ ಇದೇ ಮೊದಲ ಬಾರಿಗೆ ಗುರುವಾರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾ.ದಾಟಿದೆ. ಗುರುವಾರ ಯುದ್ಧಘೋಷಣೆಯ ಬೆನ್ನಿಗೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ರಶ್ಯದ ಕ್ರಮವನ್ನು ಪಾಶ್ಚಾತ್ಯ ಜಗತ್ತು ‘ಅಪ್ರಚೋದಿತ’ ಮತ್ತು ‘ನ್ಯಾಯಸಮ್ಮತವಲ್ಲದ’ದಾಳಿಯೆಂದು ಬಣ್ಣಿಸಿದೆ. ತೈಲಬೆಲೆಗಳಲ್ಲಿ ಏರಿಕೆಯಾಗಿದ್ದು ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ಕುಸಿದಿವೆ. 2021,ಡಿ.1ರಂದು ಪ್ರತಿ ಬ್ಯಾರೆಲ್‌ಗೆ 70.4 ಡಾ.ಇದ್ದ ಕಚ್ಚಾತೈಲ ಬೆಲೆ ಶೇ.40ಕ್ಕೂ ಅಧಿಕ ಏರಿಕೆಯೊಂದಿಗೆ 101.2 ಡಾ.ಗೆ (ಬೆಳಗ್ಗೆ 10:10ಕ್ಕೆ) ಜಿಗಿದಿತ್ತು. ಗುರುವಾರ ಬಿಎಸ್‌ಇ ಸೆನ್ಸೆಕ್ಸ್ 2702.15 (ಶೇ.4.72) ಮತ್ತು ಎನ್‌ಎಸ್‌ಇ ನಿಫ್ಟಿ 815.30 (ಶೇ.4.75) ಅಂಶಗಳ ಭಾರೀ ಕುಸಿತದೊಂದಿಗೆ ಮುಕ್ತಾಯಗೊಂಡಿವೆ. ರೂಪಾಯಿ ಕೂಡ ಅಮೆರಿಕದ ಡಾಲರ್‌ನೆದುರು 80 ಪೈಸೆಗಳ (ಶೇ.05) ಕುಸಿತವನ್ನು ಕಂಡಿದ್ದು,75.55ರಷ್ಟಿತ್ತು.

ಜನವರಿ ಮತ್ತು ಫೆಬ್ರವರಿ ನಡುವೆ ವಿದೇಶಿ ಹೂಡಿಕೆ ಸಂಸ್ಥೆ (ಎಫ್‌ಪಿಐ)ಗಳು ಭಾರತೀಯ ಶೇರು ಮಾರುಕಟ್ಟೆಗಳಿಂದ 51,703 ಕೋ.ರೂ.ಗಳನ್ನು ಹಿಂದೆಗೆದುಕೊಂಡಿವೆ.

 ಕಚ್ಚಾತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದು ಏಕೆ?

 ಉಕ್ರೇನ್‌ನಲ್ಲಿ ರಶ್ಯದ ಆಕ್ರಮಣ ಮತ್ತು ಉಕ್ರೇನಿನ ಪ್ರತ್ಯೇಕತಾವಾದಿ ಪ್ರದೇಶಗಳಾದ ಡೊನೆಸ್ಕ್ ಮತ್ತು ಲುಹಾನ್ಸ್ಕ್‌ನಲ್ಲಿ ಪುಟಿನ್‌ರಿಂದ ಸೇನಾಪಡೆಗಳ ನಿಯೋಜನೆಯ ಬಳಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವ ಭೀತಿ ತೈಲಬೆಲೆಗಳಲ್ಲಿ ಏರಿಕೆಗೆ ಪ್ರಮುಖ ಕಾರಣವಾಗಿದೆ.

ರಶ್ಯದ ಉಕ್ರೇನ್ ಆಕ್ರಮಣ ಜಾಗತಿಕವಾಗಿ ತೈಲ ಪೂರೈಕೆಗೆ ಅಡ್ಡಿಯನ್ನುಂಟು ಮಾಡುವುದು ಮಾತ್ರವಲ್ಲ,ಅಮೆರಿಕ ಮತ್ತು ಯರೋಪ್‌ನಿಂದ ನಿರ್ಬಂಧಗಳಿಗೂ ಕಾರಣವಾಗಬಹುದು.

ವಿಶ್ವದ ಎರಡನೇ ಅತ್ಯಂತ ದೊಡ್ಡ ತೈಲ ಉತ್ಪಾದಕ ದೇಶವಾಗಿರುವ ರಶ್ಯ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆಯ ಬಳಿಕ ಪೂರೈಕೆ ಕುರಿತು ಕಳವಳದಿಂದಾಗಿ ಕಳೆದ ಎರಡು ತಿಂಗಳುಗಳಿಂದಲೂ ಕಚ್ಚಾತೈಲ ಬೆಲೆಗಳು ಏರುತ್ತಲೇ ಇವೆ.

ಒಮೈಕ್ರಾನ್ ಅಲೆಯು ಉಪಶಮನಗೊಂಡ ಬಳಿಕ ಜಾಗತಿಕ ಆರ್ಥಿಕತೆಯು ಸಹಜ ಸ್ಥಿತಿಗೆ ಮರಳಿದ್ದ ಹಿನ್ನೆಲೆಯಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವೆ ಹೆಚ್ಚುತ್ತಿರುವ ಅಸಮತೋಲನವೂ ಕಳವಳವನ್ನುಂಟು ಮಾಡಿದೆ.

ನಿಗದಿತ ದಿನಾಂಕಗಳಂದು ಪೂರೈಕೆಯಾಗಬೇಕಿರುವ ಕಚ್ಚಾತೈಲಗಳ ಬೆಲೆಗಳು ಈಗಾಗಲೇ ಪ್ರತಿ ಬ್ಯಾರೆಲ್‌ಗೆ 100 ಡಾ.ದಾಟಿವೆ.

ಭಾರತೀಯ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ?

ಖಂಡಿತವಾಗಿಯೂ ಹಣದುಬ್ಬರ ಪರಿಣಾಮವುಂಟಾಗಲಿದೆ. ಭಾರತವು ತನ್ನ ಅಗತ್ಯದ ಶೇ.80ಕ್ಕೂ ಅಧಿಕ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ,ಆದರೆ ತೈಲ ಆಮದು ಪಾಲು ಅದರ ಒಟ್ಟು ಆಮದುಗಳ ಸುಮಾರು ಶೇ.25ರಷ್ಟಿದೆ. ಹೆಚ್ಚುತ್ತಿರುವ ತೈಲಬೆಲೆಗಳು ಚಾಲ್ತಿ ಖಾತೆ ಕೊರತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿವೆ.

ಕಚ್ಚಾತೈಲ ಬೆಲೆಗಳಲ್ಲಿ ಏರಿಕೆಯು ಅಡುಗೆ ಅನಿಲ ಮತ್ತು ಸೀಮೆಎಣ್ಣೆಯ ಮೇಲಿನ ಸಬ್ಸಿಡಿಯ ಹೆಚ್ಚಳಕ್ಕೂ ಕಾರಣವಾಗುವ ನಿರೀಕ್ಷೆಯಿದೆ ಮತ್ತು ಇದು ಸಬ್ಸಿಡಿ ಹೊರೆಯನ್ನು ಹೆಚ್ಚಿಸುತ್ತದೆ.

ಗ್ರಾಹಕರ ಮೇಲೆ ಅಧಿಕ ತೈಲದರದ ಪರಿಣಾಮಗಳು 2021ರಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಎತ್ತರವನ್ನು ತಲುಪಿದ್ದು,ಹೆಚ್ಚಿನ ಕಚ್ಚಾತೈಲ ಬೆಲೆಗಳು ಇದಕ್ಕೆ ಕಾರಣವಾಗಿದ್ದವು. ನವೆಂಬರ್‌ನಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 5 ರೂ. ಮತ್ತು 10 ರೂ.ಗಳಷ್ಟು ಕಡಿತ ಮಾಡಿದ ಬಳಿಕ ಮತ್ತು ಹೆಚ್ಚಿನ ರಾಜ್ಯಗಳು ವೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಿದ್ದರಿಂದ ಈ ಇಂಧನಗಳ ಚಿಲ್ಲರೆ ಮಾರಾಟ ದರಗಳು ಇಳಿಕೆಯಾಗಿದ್ದವು.

 ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀ.ಗೆ ಅನುಕ್ರಮವಾಗಿ 95.3 ರೂ. ಮತ್ತು 86.7 ರೂ.ಗಳಾಗಿವೆ. ನವೆಂಬರ್‌ನಲ್ಲಿ ತೆರಿಗೆ ಕಡಿತಗಳ ಬಳಿಕ ತೈಲ ಮಾರಾಟ ಕಂಪೆನಿಗಳು ದರಗಳನ್ನು ಪರಿಷ್ಕರಿಸಿಲ್ಲ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ನವೆಂಬರ್ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ.ಗೆ 84.7 ಡಾ.ಇದ್ದ ಕಚ್ಚಾತೈಲ ಬೆಲೆ ಡಿಸೆಂಬರ್ ಆರಂಭದಲ್ಲಿ 70 ಡಾ.ಗೂ ಕೆಳಗಿಳಿದಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಚ್ಚಾತೈಲ ಬೆಲೆಗಳ ಕುಸಿತದ ಲಾಭ ಗ್ರಾಹಕರಿಗೆ ದಕ್ಕಿರದಿದ್ದರೂ ಈಗ ಹೆಚ್ಚಿನ ಕಚ್ಚಾತೈಲ ಬೆಲೆಗಳು ಅವರ ಪಾಲಿಗೆ ಇಂಧನ ದರಗಳನ್ನು ಇನ್ನಷ್ಟು ಹೊರೆಯಾಗಿಸಲಿವೆ.

ಹೂಡಿಕೆದಾರರು ಮತ್ತು ಮಾರುಕಟ್ಟೆಗಳ ಮೇಲೆ ಏನು ಪರಿಣಾಮ?

ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ತೈಲಬೆಲೆಗಳಿಗೆ ಅನುಗುಣವಾಗಿ ಹೂಡಿಕೆದಾರರು ನಷ್ಟವನ್ನು ಅನುಭವಿಸಿದ್ದಾರೆ. ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿ ಬದಲಾಗಿದ್ದಾರೆ ಮತ್ತು ಜನವರಿ-ಫೆಬ್ರವರಿ ನಡುವೆ 51,703 ಕೋ.ರೂ.ಗಳ ಭಾರತೀಯ ಶೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಶೇರು ಮಾರುಕಟ್ಟೆಯಲ್ಲಿ ಕುಸಿತ ಮತ್ತು ಏರಿಳಿತಗಳಿಗೆ ಕಾರಣವಾಗಿದೆ. ಭೂರಾಜಕೀಯ ಕಳವಳಗಳಿಂದಾಗಿ ಮಾರುಕಟ್ಟೆ ಸದ್ಯಕ್ಕೆ ಅಸ್ಥಿರವಾಗಿಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News