ಉಕ್ರೇನ್ ನಲ್ಲಿ ಸಿಲುಕಿರುವ ಸಾಗರದ ವೈದ್ಯ ವಿದ್ಯಾರ್ಥಿನಿ: ಆತಂಕದಲ್ಲಿ ಮನೆಮಂದಿ
Update: 2022-02-25 15:30 IST
ಸಾಗರ, ಫೆ.25: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಾಗರದ ವಿದ್ಯಾರ್ಥಿನಿಯೋರ್ವಳು ಸಿಲುಕಿದ್ದು, ಆಕೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ನಗರದ ಅಣಲೇಕೊಪ್ಪದ ಎಲೆಕ್ಟ್ರಿಕ್ ಕೆಲಸ ಮಾಡುವ ಜಾನ್ ಲೋಬೋ ಮತ್ತು ತ್ರೀಜಾ ಲೋಬೋ ಅವರ ಪುತ್ರಿ ಮನಿಷಾ ಲೋಬೋ, ಉಕ್ರೇನ್ ನ ಕೀವ್ ಸಿಟಿಯಲ್ಲಿರುವ ಕೀವ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಮನಿಷಾ ಫೆ.28ರಂದು ಭಾರತಕ್ಕೆ ವಾಪಸ್ಸಾಗಲು ನಿರ್ಧರಿಸಿದ್ದರು. ಆದರೆ ಸದ್ಯ ಭಾರತಕ್ಕೆ ವಿಮಾನ ಹಾರಾಟ ಇಲ್ಲದ ಕಾರಣ ಬರಲು ಸಾಧ್ಯ ಆಗುತ್ತಿಲ್ಲಾ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಮನಿಷಾ ಬಂಕರ್ ನಲ್ಲಿ ಆಶ್ರಯ ಪಡೆದಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಮಗಳು ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಪೋಷಕರು ಪ್ರಾರ್ಥಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಮನಿಷಾ ಪೋಷಕರು, ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.