×
Ad

ಶಾಸಕರು ಅಧ್ಯಕ್ಷ ಸ್ಥಾನಕ್ಕೇರಲು ಸರಕಾರವೇ ಸುತ್ತೋಲೆ ಹೊರಡಿಸಿದೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ ಆರೋಪ

Update: 2022-02-25 18:46 IST

ಬೆಂಗಳೂರು, ಫೆ.25: ಸರಕಾರವೇ ಶಾಲೆಗಳಲ್ಲಿರುವ ಎಸ್‍ಡಿಎಂಸಿಯ ಗೌರವಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡದ ಶಾಸಕರು ಅಧ್ಯಕ್ಷ ಸ್ಥಾನಕ್ಕೇರಲು ಮೂಲ ಸುತ್ತೋಲೆಯನ್ನು ಉಲ್ಲಂಘಿಸಿ, ಮತ್ತೊಂದು ಸುತ್ತೊಲೆಯನ್ನು ಹೊರಡಿಸುವಂತೆ ಮಾಡಿದ್ದಾರೆ. ಇದನ್ನು ಬಹಿರಂಗಪಡಿಸುವವವರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ವಿ.ಪಿ. ಎಂದು ಆರೋಪಿಸಿದ್ದಾರೆ.  

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‍ಡಿಎಂಸಿ) ರಚನೆ ಹೇಗಿರಬೇಕು ಮತ್ತು ಆ ಸಮಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಏನು ಎಂಬುದನ್ನು ಸರಕಾರ 2021ರ ಅಕ್ಟೋಬರ್ 26ರಂದು ಹೊರಡಿಸಿ, ವಿವರವಾಗಿ ತಿಳಿಸಿತ್ತು. ಇದರ ಅನ್ವಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಶಾಲಾ ವ್ಯಾಪ್ತಿಯ ಶಾಸಕರು ಹಾಗೂ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಪೋಷಕರ ಪ್ರತಿನಿಧಿಗಳಿಂದ ಆಯ್ಕೆಯಾದ 16 ಜನರ ಪೈಕಿ ಬಹುಮತವಿರುವವರನ್ನು ವಿಧಿವತ್ತಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದಿದ್ದಾರೆ.

ಆದರೆ, ಶಾಲೆಗಳ ಅಭಿವೃದ್ಧಿಗೆ ಸರಕಾರÀದಿಂದ ಹಣ ಬರಲು ಪ್ರಾರಂಭವಾದ ನಂತರ, ಗೌರವಾಧ್ಯಕ್ಷರ ಸ್ಥಾನಕ್ಕೆ ತೃಪ್ತಿಪಡದ ಶಾಸಕರು ಸರಕಾರದ ಮೇಲೆ ಪ್ರಭಾವ ಬೀರಿ ಗೌರವಾಧ್ಯಕ್ಷರ ಬದಲಾಗಿ ಅಧ್ಯಕ್ಷರಾಗಲು ಮುಂದಾದರು. ಇದರ ಫಲವಾಗಿ, ಮೂಲ ಸುತ್ತೋಲೆಯನ್ನು ಉಲ್ಲಂಘಿಸಿ ಶಾಸಕರೇ ಅಧ್ಯಕ್ಷರಾಗಬೇಕು ಎಂಬ ಕಾನೂನುಬಾಹಿರ ಸುತ್ತೋಲೆಯನ್ನು ಸರಕಾರವು ಹೊರಡಿಸುವಂತೆ ಮಾಡಲು ಯಶಸ್ವಿಯಾದರು. ಅದರಂತೆ, ಹಿಂದಿನ ಕಾನೂನುಬದ್ಧ ಸುತ್ತೋಲೆಯನ್ನು ಮಾರ್ಪಡಿಸಿ ಕಾನೂನುಬಾಹಿರವಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿಸಿ, 2022ರ ಜ.30ರಂದು ಸುತ್ತೋಲೆ ಹೊರಡಿಸಿತು ಎಂದು ಮಾಹಿತಿ ನೀಡಿದ್ದಾರೆ.

ಹಾಗಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಶಾಸಕರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸುತ್ತೋಲೆ ಹೇಳುತ್ತದೆ. ಇದು ಕಾನೂನುಬಾಹಿರ ಮತ್ತು ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆಯಾಗಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸುತ್ತಿರುವ ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸದಸ್ಯರಿಗೆ ಸಚಿವರು ಮತ್ತು ಅವರ ಹಿಂಬಾಲಕರು ಅನಗತ್ಯ ಕಿರುಕುಳ ನೀಡುತ್ತಿರುವುದು ಸಮನ್ವಯ ವೇದಿಕೆಯ ಗಮನಕ್ಕೆ ಬಂದಿದೆ. ಇನ್ನು ಮುಂದೆ ಸಮನ್ವಯ ವೇದಿಕೆ ಸದಸ್ಯರಿಗೆ ನೀಡುತ್ತಿರುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತದೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News