×
Ad

ಕಲಬುರಗಿ: ಹಣ, ಚಿನ್ನಾಭರಣ ದೋಚಿ, ಆ್ಯಸಿಡ್ ಕುಡಿಸಿ ಚಿನ್ನದ ವ್ಯಾಪಾರಿಯ ಹತ್ಯೆ

Update: 2022-02-25 21:25 IST
ಮೃತ ಚಿನ್ನದ ವ್ಯಾಪಾರಿ ವಿಜಯಕುಮಾರ್‌ ಶಿಲವಂತ

ಕಲಬುರಗಿ: ಹಣ, ಚಿನ್ನಾಭರಣ ಕಸಿದುಕೊಂಡು ಅ್ಯಸಿಡ್‌ ಕುಡಿಸಿ ರಾಡ್‌ನಿಂದ ಹೊಡೆದು ಅಕ್ಕಸಾಲಿಗನ ಬರ್ಬರ ಹತ್ಯೆಗೈದ ಘಟನೆ ಚಿತ್ತಾಪುರ ತಾಲೂಕಿನ ರಾವೂರ್‌ ಕ್ರಾಸ್‌ ಬಳಿ ನಡೆದಿದೆ. 

ಕಲಬುರಗಿಯ ಶಹಬಜಾರ ಕಬಾಡ್‌ ಗಲ್ಲಿ ನಿವಾಸಿ ವಿಜಯಕುಮಾರ್‌ ಶಿಲವಂತ (38) ಹತ್ಯೆಯಾದ ಅಕ್ಕಸಾಲಿಗ.

ವಿಜಯಕುಮಾರ್‌ ಅವರು ಆರು ಲಕ್ಷ ರೂ ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ ಎಂದು ತಿಳದು ಬಂದಿದೆ.

ಬಳಿಕ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಲ್ಲದೆ , ವಿಜಯಕುಮಾರಗೆ ಅ್ಯಸಿಡ್‌ ಕುಡಿಸಿ ರಾಡ್‌ನಿ೦ದ ಹೊಡೆದು ಹತ್ಯೆಗೈದು  ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್‌ ಠಾನ್ವ್ಯತಾಣ್ಥ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News