ಸಾಗರ: ಕೃಷ್ಣ ಮೃಗದ ಚರ್ಮ ಮಾರಾಟ ಯತ್ನ; ಆರೋಪಿ ವಶಕ್ಕೆ
Update: 2022-02-27 20:59 IST
ಸಾಗರ,ಫೆ.27 : ಕಾನೂನು ಬಾಹಿರವಾಗಿ ಕೃಷ್ಣಮೃಗಗಳ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯೋರ್ವನನ್ನು ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಅರಣ್ಯ ಸಂಚಾರಿದಳದ ಸಬ್ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ. ಬಿ ಮತ್ತು ಸಿಬ್ಬಂದಿ ಗಣೇಶ್,ಗಿರೀಶ್,ವಿಶ್ವನಾಥ ಕೃಷ್ಣ, ದಿನೇಶ ಮತ್ತು ಚೈತ್ರ ಅವರ ತಂಡ ಆರೋಪಿ ಮುರಳಿಧರ ನಾಯ್ಕ್ ನನ್ನು ಬಂಧಿಸಿದೆ.
ಆರೋಪಿಯಿಂದ ಎರಡು ಕೃಷ್ಣ ಮೃಗದ ಚರ್ಮಗಳನ್ನು ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.