ಇದು ಮೇಕೆದಾಟಲ್ಲ, ಕಾಂಗ್ರೆಸ್ ದಾಟು ಪಾದಯಾತ್ರೆ: ವಾಟಾಳ್ ನಾಗರಾಜ್
ಮೈಸೂರು,ಫೆ.27: 'ಅಧಿಕಾರದಲ್ಲಿದ್ದಾಗ ಯೋಜನೆ ಜಾರಿ ಮಾಡದೆ ಇಂದು ಕಾಂಗ್ರೆಸ್ ನವರು ಮಾಡುತ್ತಿರುವ ಪಾದಯಾತ್ರೆ ಮೇಕೆದಾಟಲ್ಲ ಅದು ಕಾಂಗ್ರೆಸ್ ದಾಟು ಪಾದಯಾತ್ರೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದ ಅರ್ ಗೇಟ್ ವೃತ್ತದಲ್ಲಿ ರವಿವಾರ ಬಿಳಿ ಬಾವುಟ ಪ್ರದರ್ಶನ ಮಾಡುವ ಮೂಲ ಉಕ್ರೇನ್ ಗೆ ಬೆಂಬಲ ಸೂಚಿಸಿ ಶಾಂತಿನೆಲೆಸುವಂತೆ ಪ್ರತಿಭಟನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೇಕೆದಾಟಲ್ಲ ಇದು ಕಾಂಗ್ರೆಸ್ ದಾಟು, ಕಾಂಗ್ರೆಸ್ ನವರ ಈ ರೀತಿ ಹೋರಾಟ ಸರಿಯಲ್ಲ, ಇವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು. ಕಾಂಗ್ರೆಸ್ನವರಿಗೆ ಪಾದಯಾತ್ರೆ ಮಾಡಲು ನೈತಿಕ ಹಕ್ಕಿಲ್ಲ ಎಂದರು.
ಇದು ಸಾರ್ವಜನಿಕರಿಗಾಗಿ ನಡೆಯುತ್ತಿರುವ ಹೋರಾಟವಲ್ಲ, ನಿಜಕ್ಕೂ ಇದು ರಾಜಕೀಯ ದರ್ಬಾರ್ ಕಾಂಗ್ರೆಸ್ ದರ್ಬಾರ್, ಉತ್ತರ ಕರ್ನಾಟಕದಲ್ಲಿ ನದಿಗಳು ನದಿಗಳ ಯೋಜನೆ ನಿಂತಿವೆ. ಹೈದರಬಾದ್ ಕರ್ನಾಟಕದಲ್ಲಿ ನದಿಗಳ ಯೋಜನೆ ನಿಂತಿದೆ ಇದೆಲ್ಲವನ್ನು ಬಿಟ್ಟು ಮೇಕೆದಾಟ್ ಬಗ್ಗೆ ಪಾದಯಾತ್ರೆ ಮಾಡುತ್ತಿರುವುದು ದೊಡ್ಡ ಸ್ಟಂಟ್, ಮೊದಲು ಪಾದಯಾತ್ರೆ ಮಾಡಿದಿರಿ ಈಗ ಮತ್ತೆ ಮಾಡುವುದು ಸರಿಯಲ್ಲ. ನಿಮ್ಮ ಸರ್ಕಾರ ಮೇಕೆದಾಟು ಮಾಡಬೇಕಿತ್ತು. ನಿಮ್ಮ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.