ವಿರಾಜಪೇಟೆಯಲ್ಲಿ ಅಪಘಾತ : 3 ವಾಹನ ಜಖಂ, ಓರ್ವನಿಗೆ ಗಂಭೀರ ಗಾಯ
Update: 2022-03-01 22:58 IST
ಮಡಿಕೇರಿ: ಮೂರು ಚಕ್ರದ ಗೂಡ್ಸ್ ವಾಹನಕ್ಕೆ ಕಾರು ಢಿಕ್ಕಿಯಾಗಿ ಗೂಡ್ಸ್ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆಯ ಮೂರ್ನಾಡು ರಸ್ತೆ ಮಠದ ಗದ್ದೆಯ ತಿರುವಿನಲ್ಲಿ ನಡೆದಿದೆ.
ಮೈತಾಡಿ ಗ್ರಾಮದಿಂದ ವಿರಾಜಪೇಟೆ ಪಟ್ಟಣಕ್ಕೆ ಗೂಡ್ಸ್ ವಾಹನ ಆಗಮಿಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು, ಗಾಯಗೊಂಡ ಚಾಲಕ ಮುಹಮ್ಮದ್ ತಾಹೀರ್ (31)ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನದಲ್ಲಿದ್ದ ಮೈತಾಡಿ ಗ್ರಾಮದ ಕಾಫಿ ಬೆಳೆಗಾರ ಬಲ್ಲಚಂಡ ಹರಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆ ಸಂದರ್ಭ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರು ಕೂಡ ಜಖಂಗೊಂಡಿದೆ. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.