ಸಚಿವ ಸುಧಾಕರ್ ಸದನದಲ್ಲೇ ಕ್ಷಮೆಯಾಚಿಸಬೇಕು: ಬಿಜೆಪಿ ಶಾಸಕ ಹರ್ಷವರ್ಧನ್ ಒತ್ತಾಯ

Update: 2022-03-04 11:07 GMT

ಮೈಸೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು  ಬೌದ್ಧಧಮ೯ದ ಬಗ್ಗೆ ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡಡಿರುವುದು ಖಂಡನೀಯ,  ಈ ಕೂಡಲೇ ಅವರು  ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಕ್ಷದ ನಂಜನಗೂಡು ಕ್ಷೇತ್ರದ ಶಾಸಕ   ಹರ್ಷವರ್ಧನ್ ಆಗ್ರಹಿಸಿದ್ದಾರೆ.

ಈ ಸಂಬಂಧ ನಂಜನಗೂಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು,  ಸಚಿವ ಡಾ.ಕೆ.ಸುಧಾಕರ್ ಅವರಿಗೆ  ಬೌದ್ಧಧಮ೯ದ ಇತಿಹಾಸ ತಿಳಿಯಬೇಕಾದರೆ ಸಾಮ್ರಾಟ್ ಅಶೋಕನ ಕುರಿತು ಓದಿಕೊಳ್ಳಲಿ ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಚಿವರ ಹೇಳಿಕೆ ಖಂಡಿಸಿ ಸದನದಲ್ಲಿ ವಿರೋಧಪಕ್ಷದವರು ಈ ಬಗ್ಗೆ ಚಚಿ೯ಸಿದರೆ ನಾನು ಕೂಡ ಬೆಂಬಲಿಸಿ ಸಚಿವರು ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಬೌದ್ಧಧಮ೯ ಅತ್ಯಂತ ಶ್ರೇಷ್ಠಧಮ೯, ಅದಕ್ಕೆ ತನ್ನದೇ ಆದ ಪ್ರಾವಿತ್ರ್ಯತೆಯಿಂದ ಇದೆ. ಈ ಕಾರಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಸ್ಲಿಂ,ಕ್ರೈಸ್ತ ಹೀಗೆ ಎಲ್ಲ ಧಮ೯ಗಳ ಬಗ್ಗೆಯೂ ಅಧ್ಯಯನ ನಡೆಸಿ ಬೌದ್ಧಧಮ್ಮ ಸ್ವೀಕರಿಸಿದ್ದು. ನಮ್ಮ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರ, ರಾಷ್ಟ್ರಲಾಂಛನದ ನಾಲ್ಕು ಸಿಂಹ ಬೌದ್ಧಧಮ೯ದ ಪ್ರೇರಣೆಯಿಂದ ಬಂದಿರುವುದು. ಬೌದ್ಧಧಮ೯ದ ಕುರಿತು ಬಹುದೊಡ್ಡ ಇತಿಹಾಸವಿದೆ. ಭಾರತದಲ್ಲಿ ಹುಟ್ಟಿದ ಬೌದ್ದಧಮ೯ ಜಗತ್ತಿನೆಲ್ಲೆಡೆ ಹರಡಿದೆ. ಶ್ರೀಲಂಕಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಬೌದ್ಧ ಧರ್ಮವನ್ನೇ ಪಾಲನೆ ಮಾಡುತ್ತಿರುವುದು ಎಂದು ಹೇಳಿದರು.

ಯುದ್ದಗಳ ಮೂಲಕ ರಾಜ್ಯಗಳನ್ನೆಲ್ಲ ಗೆದ್ದ ಸಾಮ್ರಾಟ್ ಅಶೋಕ ಕೊನೆಗೆ ಬೌದ್ಧಧಮ೯ಕ್ಕೆ ಶರಣಾಗಿ ಜಗತ್ತಿನೆಲ್ಲೆಡೆ ಧಮ್ಮ ಪ್ರಚಾರ ಮಾಡಿದನು. ಆದರೆ ಅದು ಯಾಕೆ ನಮ್ಮ ದೇಶದಲ್ಲಿ ಅಲ್ಲಿಗೆ ಮುಕ್ತಾಯವಾಯಿತು ಎನ್ನುವುದನ್ನು ಆ ಮೇಲೆ ಚಚಿ೯ಸೋಣ ಆದರೆ ಈಗ ಜಗತ್ತಿಗೆ ಬೇಕಿರುವುದು 'ಯುದ್ಧ ಅಲ್ಲ ಬುದ್ಧ' ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News