×
Ad

ತೆರಿಗೆ ದರದಲ್ಲಿ ಹೆಚ್ಚಳವಿಲ್ಲದೆ ಯಥಾಸ್ಥಿತಿ ಕಾಯ್ದುಕೊಂಡ ರಾಜ್ಯ ಬಜೆಟ್

Update: 2022-03-04 15:05 IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಿಲ್ಲ ಎಂದು ಪ್ರಸ್ತಾಪಿಸಿದ್ದಾರೆ.

"2021-21 ರಲ್ಲಿ ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದೆ. ಈ ಸಂದರ್ಭಗಳಲ್ಲಿ, ಸಾಮಾನ್ಯ ಜನರ ಮೇಲೆ ಹೆಚ್ಚುವರಿ ತೆರಿಗೆಗಳ ಹೆಚ್ಚುವರಿ ಹೊರೆ ಹಾಕಲು ಬಯಸುವುದಿಲ್ಲ. ಹೀಗಾಗಿ ಯಾವುದೇ ತೆರಿಗೆ ದರವನ್ನು ಏರಿಕೆ ಮಾಡುವುದಿಲ್ಲ. ಬದಲಿಗೆ, ತೆರಿಗೆ ಸಂಗ್ರಹ ಇಲಾಖೆಗಳ ದಕ್ಷತೆ ಹೆಚ್ಚಿಸಿ, ಸಂಪನ್ಮೂಲ ಸಂಗ್ರಹದ ಗುರಿ ಸಾಧನೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ. 

ತೆರಿಗೆ ಪ್ರಸ್ತಾವನೆ:

► 2022-23ರಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ.

► 2022-23ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ರೂ.,

►ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ.,

►ರಾಜ್ಯ ಅಬಕಾರಿ ಇಲಾಖೆಗೆ 29,000 ಕೋಟಿ ರೂ. 

►ಸಾರಿಗೆ ಇಲಾಖೆಗೆ 8,007 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ನಿಗದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News