ಗುಂಡ್ಲುಪೇಟೆ ಗಣಿಯಲ್ಲಿ ಗುಡ್ಡಕುಸಿತ ಪ್ರಕರಣ: 6 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ

Update: 2022-03-04 16:56 GMT

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 6 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ  ಶಂಕೆ ವ್ಯಕ್ತವಾಗಿದೆ. 

ಕರ್ನಾಟಕ - ಕೇರಳ ಹೆದ್ದಾರಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಮಡಹಳ್ಳಿ ಗುಮ್ಮನಗುಡ್ಡ ಕುಸಿದ ಪರಿಣಾಮ ಬಿಳಿಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಹಲವಾರು ಮಂದಿ ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆ. 

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಬಿಳಿಕಲ್ಲು ಗಣಿಗಾರಿಕೆ ವೇಳೆ ಬಂಡೆಕಲ್ಲುಗಳಿರುವ ಗುಡ್ಡ ಕುಸಿತಗೊಂಡ ಹಿನ್ನಲೆ ಟಿಪ್ಪರ್, ಟ್ಯ್ರಾಕ್ಟರ್, ಹಿಟಾಚಿಗಳೆಲ್ಲವೂ ನಾಶವಾಗಿದ್ದು, ಗಂಭೀರವಾಗಿ ಗಾಯಗೊಂಡ ಕಾರ್ಮಿಕರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ನೆರೆ ಜಿಲ್ಲೆಯ ಕಾರ್ಮಿಕರೇ ಆಗಿದ್ದಾರೆ.

ಚಾರುಲತಾ ಸೋಮಲ್- ಚಾಮರಾಜನಗರ ಜಿಲ್ಲಾಧಿಕಾರಿ  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News