×
Ad

ರಾಜ್ಯ ಬಜೆಟ್ ಗಾತ್ರ 2,65,720 ಕೋಟಿ ರೂ.; ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ?

Update: 2022-03-04 19:17 IST

ಬೆಂಗಳೂರು, ಮಾ.4: 2022-23ನೆ ಸಾಲಿನ ರಾಜ್ಯ ಬಜೆಟ್ ಗಾತ್ರ 2,65,720 ಕೋಟಿ ರೂ.ಗಳು. ಒಟ್ಟು ಸ್ವೀಕೃತಿ 2,61,977 ಕೋಟಿ ರೂ., ರಾಜಸ್ವ ಸ್ವೀಕೃತಿ 1,89,888 ಕೋಟಿ ರೂ.ಗಳು. ಸಾರ್ವಜನಿಕ ಋಣ(ಸಾಲ) 72 ಸಾವಿರ ಕೋಟಿ ರೂ.ಸೇರಿದಂತೆ ಬಂಡವಾಳ ಸ್ವೀಕೃತಿ 72,089 ಕೋಟಿ ರೂ.ಗಳು. ಒಟ್ಟು ವೆಚ್ಚ 2,65,720 ಕೋಟಿ ರೂ., ರಾಜಸ್ವ ವೆಚ್ಚ 2,04,587 ಕೋಟಿ ರೂ., ಬಂಡವಾಳ ವೆಚ್ಚ 46,955 ಕೋಟಿ ರೂ.ಹಾಗೂ ಸಾಲ ಮರುಪಾವತಿ 14,179 ಕೋಟಿ ರೂ.ಗಳು.

ವಲಯವಾರು ಒದಗಿಸಲಾದ ಆಯವ್ಯಯ: 

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ರೂ., ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,479 ಕೋಟಿ ರೂ., ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು 55,657 ಕೋಟಿ ರೂ., ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ 3,102 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ 56,710 ಕೋಟಿ ರೂ., ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 43,188 ಕೋಟಿ ರೂ., ಮಕ್ಕಳ ಅಭ್ಯುದಯಕ್ಕೆ 40,944 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಎಸ್ಸಿಎಸ್ಪಿ/ಟಿಎಸ್ಪಿಗೆ 28,234 ಕೋಟಿ ರೂ. ಹಾಗೂ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಇತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ 6,329 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News