ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕೋರಿ ಧರಣಿ
Update: 2022-03-05 14:13 IST
ಚಿಕ್ಕಮಗಳೂರು, ಮಾ.5: ಈ ಹಿಂದೆ ಇದ್ದಂತೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಐಡಿಎಸ್ ಜಿ ಕಾಲೇಜಿನ ಗೇಟ್ ಬಳಿ ಶನಿವಾರ ಧರಣಿ ನಡೆಸಿದರು.
ಈ ಕಾಲೇಜಿನಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ತರಗತಿ ಬಹಿಷ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸುಮಾರು 25 ವಿದ್ಯಾರ್ಥಿನಿಯರು ಪಠ್ಯಪುಸ್ತಕಗಳನ್ನು ಹಿಡಿದು ಧರಣಿ ಕುಳಿತಿದ್ದಾರೆ.
'ಮಾ.16ರಿಂದ ಆಂತರಿಕ, ಪ್ರಯೋಗಾಲಯ ಪರೀಕ್ಷೆ ಇವೆ. ಆದ್ದರಿಂದ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಕಾಲೇಜಿನ ಸಭಾಂಗಣ, ಆವರಣದಲ್ಲಾದರೂ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟು ವಿದ್ಯಾರ್ಥಿನಿಯರು ಕಾಲೇಜು ಗೇಟ್ ಎದುರು ಧರಣಿ ನಡೆಸಿದರು.