×
Ad

ಹಿಜಾಬ್ ವಿರೋಧಿಗಳ ಬಗ್ಗೆ ಹೇಳಿಕೆಗೆ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಧಾರವಾಡದಲ್ಲಿ ಎಫ್‍ಐಆರ್ ದಾಖಲು

Update: 2022-03-05 14:56 IST
ರಾಣಾ ಅಯ್ಯೂಬ್ (Photo: Twitter)

ಬೆಂಗಳೂರು: ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ವಿರೋಧಿಸುವವರನ್ನು 'ಹಿಂದು ಉಗ್ರವಾದಿಗಳು' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಅವರ ವಿರುದ್ಧ ಐಪಿಸಿಯ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಉದ್ದೇಶಪೂರ್ವಕ ದುರುದ್ದೇಶಪೂರಿತ ಕೃತ್ಯಗಳು) ಅನ್ವಯ ಪ್ರಕರಣ ದಾಖಲಾಗಿದೆ. ಹಿಂದು ಐಟಿ ಸೆಲ್ ಎಂಬ ಗುಂಪಿನ ಸ್ವಯಂಸೇವಕರೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಈ ಎಫ್‍ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿಯಲ್ಲಿ ಬಿಬಿಸಿ ಸಂದರ್ಶನವೊಂದರಲ್ಲಿ ಅಯ್ಯೂಬ್ ಮೇಲಿನ ಹೇಳಿಕೆಗಳನ್ನು ನೀಡಿದ್ದರೆಂದು ತಿಳಿದು ಬಂದಿದೆ.

"ದಶಕಗಳಿಂದ  ವಿವಿಧ ಧರ್ಮಗಳ ವಿದ್ಯಾರ್ಥಿಗಳು ತಮ್ಮ ಧರ್ಮದ ಚಿಹ್ನೆಗಳನ್ನು ಧರಿಸುತ್ತಿದ್ದಾರೆ. ಸಿಖರು ಟರ್ಬನ್ ಧರಿಸಿ ಶಾಲೆಗೆ ಹೋಗುತ್ತಾರೆ ಮತ್ತು ಮುಸ್ಲಿಂ ಬಾಲಕಿಯರಿಗೆ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗಲು ಅನುಮತಿಸಲಾಗಿತ್ತು. ಈ ಬಾಲಕಿಯರು ಬಹಳ ಸಮಯದಿಂದಲೂ ಹಿಜಾಬ್ ಧರಿಸುತ್ತಿದ್ದಾರೆ, ಇದೇನೂ ಮೊದಲ ಬಾರಿಯಲ್ಲ, ದಿಢೀರ್ ಆಗಿ ಈ ಯುವ ಹಿಂದುಗಳ ಗುಂಪು, ಹಿಂದು ಉಗ್ರರು ಕರ್ನಾಟಕದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೇಸರಿ ಧ್ವಜಗಳನ್ನೇಕೆ ಹಾರಿಸಿದರು? ವಿದ್ಯಾರ್ಥಿಗಳು ಅದೇಕೆ ಕೇಸರಿ ಧ್ವಜ ಹಾರಿಸಿದ್ದಾರೆ ಅದರ ಅರ್ಥವೇನು?'' ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಉಕ್ರೇನ್ ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News