×
Ad

ಉಕ್ರೇನ್ ನಲ್ಲಿ ಕರ್ನಾಟಕದ ಇನ್ನೂ 200 ವಿದ್ಯಾರ್ಥಿಗಳು: ಸಿಎಂ ಬೊಮ್ಮಾಯಿ

Update: 2022-03-06 09:23 IST

ಬೆಂಗಳೂರು, ಮಾ.6: ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಕರ್ನಾಟಕದ ಇನ್ನೂ 200 ವಿದ್ಯಾರ್ಥಿಗಳು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ವಿಮಾನ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದರು‌. ಅವರನ್ನು ಹಂತಹಂತವಾಗಿ ಕರೆ ತರಲಾಗುತ್ತಿದೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಬಹಳಷ್ಟು ನೆರವಾಗಿದ್ದಾರೆ ಎಂದರು.

ಇದೇವೇಳೆ ಉಕ್ರೇನ್ ನಿಂದ ತಾಯ್ನಾಡಿಗೆ ಆಗಮಿಸಿದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯಲವಿಗಿ ಗ್ರಾಮದ ಚೈತ್ರಾ ಸಂಶಿ ಅವರನ್ನು ಮುಖ್ಯಮಂತ್ರಿ ಇಂದು ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.

ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬಂದಿದ್ದಕ್ಕೆ ಸಿಎಂ ಹರ್ಷ ವ್ಯಕ್ತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News