×
Ad

ಉಕ್ರೇನ್‌ನಲ್ಲಿ ನಿನ್ನೆ 6 ಗಂಟೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ಮೋದಿ: ಸಚಿವ ಹಾಲಪ್ಪ ಆಚಾರ್

Update: 2022-03-06 18:21 IST

ಕೊಪ್ಪಳ: 'ಚೀನಾದವರು, ಬೇರೆ ಬೇರೆ ದೇಶದವರು ನಮ್ಮ ರಾಯಭಾರಿ ಕಚೇರಿ ಮೂಲಕ ಇವತ್ತು ಉಕ್ರೇನ್ ನಿಂದ ಸುರಕ್ಷಿತವಾಗಿ ಬಂದಿದ್ದಾರೆ. ನಿನ್ನೆ 6ಗಂಟೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಏನಿದು ಸಾಮಾನ್ಯನಾ?' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ಕೊಪ್ಪಳದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಇದನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಯುದ್ಧ ನಡೆಯಬೇಕಾದರೆ ಸಾಕಷ್ಟು ತೊಂದರೆಗಳಾಗುತ್ತೆ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆ ಮುಟ್ಟಿಸಿದ್ದೇವೆಯಲ್ಲಾ ಇದಕ್ಕಿಂತ ಇನ್ನೇನು ಮಾಡಬೇಕು ನಾವು ಒಂದು ಸರಕಾರ ಆಗಿ.  ನಮ್ಮ ಸರಕಾರದ ಪ್ರಭಾವ, ನಮ್ಮ ಸರಕಾರದ ಕಾಳಜಿ ಎಷ್ಟಿದೆ ಎಂಬುದು ಅನೇಕ ರಾಷ್ಟ್ರಗಳು ನೋಡುತ್ತಿದೆ'' ಎಂದು ತಿಳಿಸಿದರು. 

''ಇಂಥ ಗಂಭೀರ ಪರಿಸ್ಥಿತಿಯಲ್ಲಿ  ಸಾಮಾನ್ಯವಾಗಿ ತೊಂದರೆಯಾಗಲೇ ಬೇಕು, ಯಾರೇ ಇದ್ದರೂ ಅನುಭವಿಸಬೇಕು. ಅದನ್ನು ನಮ್ಮ ದೇಶದ ಮೇಲೆ ಹಾಕೋದು ಸರಿಯಲ್ಲ'' ಎಂದು ಸಚಿವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News