×
Ad

ಉಕ್ರೇನ್‍ನಲ್ಲಿ ಸಿಲುಕಿದ್ದ ಚಿಕ್ಕಮಗಳೂರಿನ 7 ಮಂದಿ ವಿದ್ಯಾರ್ಥಿಗಳ ಪೈಕಿ ಇಬ್ಬರು ವಾಪಸ್

Update: 2022-03-06 20:23 IST
ವಿದ್ಯಾರ್ಥಿನಿ ಪೂಜಾ

ಚಿಕ್ಕಮಗಳೂರು, ಮಾ.6: ಭೀಕರ ಯುದ್ಧಕ್ಕೆ ಸಾಕ್ಷಿಯಾಗಿರುವ ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಕಾಫಿನಾಡಿನ 7 ಮಂದಿ ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ರವಿವಾರ ಮುಂಬೈ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ.

ರಶ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದಿಂದಾಗಿ ಸ್ವದೇಶಕ್ಕೆ ಹಿಂದಿರುಗಲಾರದೇ ಉಕ್ರೇನ್‍ನ ಬಂಕರ್ ಗಳಲ್ಲಿ ಅಡಗಿಕೊಂಡು ಪ್ರಾಣ ಉಳಿಸಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವೈಭವ್ ಎಲ್.ಸಪ್ತಗಿರಿ ಮತ್ತು ಕಡೂರು ತಾಲೂಕಿನ ಎಚ್.ಸಿ.ಪೂಜಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ವೈಭವ್ ಎಲ್.ಸಪ್ತಗಿರಿ ತರೀಕೆರೆ ತಾಲೂಕಿನ ಟಿ.ಎನ್.ಲೋಕೇಶ್ ಮತ್ತು ಎ.ಎಸ್.ಕವಿತಾ ದಂಪತಿ ಪುತ್ರನಾಗಿದ್ದು, ಉಕ್ರೇನ್ ದೇಶದ ಬೋಕವೇನಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಡೂರು ತಾಲೂಕಿನ ಮತ್ತಣಗೆರೆ ಚಂದ್ರಮ್ಮ ಎಂಬವರ ಪುತ್ರಿಯಾಗಿರುವ ಎಚ್.ಸಿ.ಪೂಜಾ ಅವರು ಉಕ್ರೇನ್ ದೇಶದ ಝಪೆÇ್ರೀಷಿಯಾ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ಎಂಬಿಬಿಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ವಿದ್ಯಾರ್ಥಿಗಳು ಕಳೆದ ಶುಕ್ರವಾರ ಆಪರೇಶನ್ ಗಂಗಾ ಮೂಲಕ ಮುಂಬೈಗೆ ಬಂದಿದ್ದು, ರವಿವಾರ ಹುಟ್ಟೂರು ತಲುಪಿದ್ದಾರೆಂದು ತಿಳಿದು ಬಂದಿದೆ.

ರಶ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಇವರಿ ಬ್ಬರು ಉಕ್ರೇನ್‍ನಲ್ಲಿ ಸಿಲುಕೊಂಡಿದ್ದರು. ಯುದ್ಧ ಆರಂಭವಾದ ಬಳಿಕ ಅಲ್ಲಿ ಬಾರೀ ಕಷ್ಟ ಎದುರಿಸಬೇಕಾಯಿತು. ಭಾರತದ ತ್ರಿವರ್ಣ ಧ್ವಜ ನಮ್ಮನ್ನೂ ಕಾಪಾಡಿತು ಎಂದು ಇಬ್ಬರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹೊರಡಿಸಿದ ಪತ್ರಿಕಾ ಪ್ರಕಟನೆಯಲ್ಲಿ ಜಿಲ್ಲೆಯ 7 ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಅವರು ಸುರಕ್ಷಿತವಾಗಿದ್ದಾರೆ ತಿಳಿಸಲಾಗಿತ್ತು. 7ಜನರಲ್ಲಿ ಇಬ್ಬರು ತಾಯ್ನಾಡಿಗೆ ಮರಳಿದ್ದು, ಆಲ್ದೂರಿನ ಪ್ರದ್ವಿನ್, ಸಖರಾಯಪಟ್ಟಣದ ಮನೋಜ್, ಚಿಕ್ಕಮಗಳೂರು ನಗರದ ಬಸವನಹಳ್ಳಿ ಬಡಾವಣೆಯ ಡಾ.ಶ್ರೀನಿವಾಸ್ ಅವರ  ಮಗ ಸೇರಿದಂತೆ ಇನ್ನೂ 5 ಮಂದಿ ವಿದ್ಯಾರ್ಥಿಗಳು ಉಕ್ರೇನ್‍ನಲ್ಲೇ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಕರೆ ತರುವ ಜವಬ್ದಾರಿ ಸರಕಾರದ ಮೇಲಿದ್ದು, ಈ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ 7 ಜನ ವಿದ್ಯಾರ್ಥಿಗಳಲ್ಲಿ ಪೂಜಾ, ವೈಭವ್ ಎಸ್.ಸಪ್ತಗಿರಿ ಭಾರತ ತಲುಪಿದ್ದಾರೆ. ಅರುಣ್ ಮತ್ತು ಪ್ರದ್ವಿನ್ ವಿಮಾನದಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ದೇಶದ ಪಶ್ಚಿಮ ಗಡಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಸರಕಾರ ಪ್ರಯತ್ನಿಸುತ್ತಿದೆ.

- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News