×
Ad

ಪಂಜಾಬ್‍ ಸೇನಾ ಶಿಬಿರದಲ್ಲಿ ಗುಂಡಿಕ್ಕಿ ನಾಲ್ವರು ಯೋಧರ ಸಾವಿಗೆ ಕಾರಣನಾದವ ಬೆಳಗಾವಿಯ ಯೋಧ

Update: 2022-03-07 10:59 IST

ಬೆಳಗಾವಿ, ಮಾ.7: ಪಂಜಾಬ್‌ನ ಅತ್ತಾರಿ ವಾಘಾ ಗಡಿ ಬಳಿಯ ಸೇನಾ ಶಿಬಿರದಲ್ಲಿ ರವಿವಾರ ನಾಲ್ವರು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯ ಯೋಧರನ್ನು ಕೊಂದು ತಾನು ಗುಂಡಿಕ್ಕಿಕೊಂಡು ಮೃತಪಟ್ಟಿರುವ ಯೋಧ ಬೆಳಗಾವಿ ಜಿಲ್ಲೆಯವರು ಎಂಬ ಮಾಹಿತಿ ತಿಳಿದುಬಂದಿದೆ.

ಈತನ ಹೆಸರು ಬಿಎಸ್‌ಎಫ್‌ ಪೇದೆ ಸತ್ಯಪ್ಪ ಸಿದ್ಧಪ್ಪ ಕಿಲಾರಗಿ. ಈತ ಹುಕ್ಕೇರಿ ತಾಲೂಕಿನ ಯಮಕನಮರಡಿ ನಿವಾಸಿ ಎಂದು ತಿಳಿದುಬಂದಿದೆ.

ಈ ಯೋಧ ಗುಂಡು ಹಾರಿಸಿ ನಾಲ್ವರ ಸಾವಿಗೆ ಕಾರಣವಾಗಿದ್ದಲ್ಲದೆ, ತಾನು ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದು ವರದಿಯಾಗಿತ್ತು. ಆದರೆ ಅವರು ಯಾಕೆ ಈ ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ.

 ಪಂಜಾಬ್‌ನ ಅಮೃತಸರದ ಖಾಸಾ ಎಂಬಲ್ಲಿರುವ ಸೇನಾ ಶಿಬಿರದಲ್ಲಿ ಬಿಎಸ್‌ಎಫ್‌ ಪೇದೆ ಸತ್ಯಪ್ಪ ಸಿದ್ಧಪ್ಪ ಕಿಲಾರಗಿಯು ರವಿವಾರ ಸಹೋದ್ಯೋಗಿಗಳಾದ ಐವರು ಬಿಎಸ್‌ಎಫ್‌ ಯೋಧರ ಮೇಲೆ ಗುಂಡು ಹಾರಿಸಿದ್ದರೆನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರಲ್ಲದೆ, ಸತ್ಯಪ್ಪ ಕೂಡಾ ಹತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News