ವಿಡಿಯೋ ನೋಡಿ- ಆರೆಸ್ಸೆಸ್ ನಿಂದ ಬಂದ ಅಶೋಕ, ಈಶ್ವರಪ್ಪಗೆ ಸಿಎಂ ಸ್ಥಾನ ಸಿಕ್ಕಿಲ್ಲ: ಸಿದ್ದರಾಮಯ್ಯ
Update: 2022-03-07 13:33 IST
ಬೆಂಗಳೂರು: ' ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಸೋಮವಾರ ಭಾಗವಹಿಸಿರುವ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಎಸ್.ಆರ್ ಬೊಮ್ಮಾಯಿ ಅವರ ಪ್ರಭಾವ ಇದೆ ಎಂದು ನನ್ನ ಅನಿಸಿಕೆ. ಆದರೆ ಬಜೆಟ್ ನೋಡಿದ ಮೇಲೆ ಆರೆಸ್ಸೆಸ್ ಪ್ರಭಾವದ ಮುಂದೆ ಅವರು ಸೋತು ಹೋಗಿದ್ದಾರೆ ಅಂಥ ಅನಿಸಿತ್ತು.
ಇನ್ನು ಸಿದ್ದರಾಮಯ್ಯ ಅವರು ಚರ್ಚೆ ಆರಂಭಿಸುತ್ತಿದ್ದಂತೆ ಸದನದಿಂದ ತೆರಳಲು ಸಚಿವ ಆರ್.ಅಶೋಕ್ ಹಾಗೂ ಮುನಿರತ್ನ ಮುಂದಾದಾಗ, 'ನಾನು ಭಾಷಣ ಮಾಡುವಾಗ ಮುನಿರತ್ನ, ಅಶೋಕ ಓಡಾಡಿದ್ರೆ ಹೆಂಗೆ? ಎಂದು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಅಶೋಕ್ , ‘ನೀರು ಕುಡಿಯಲು ಹೋಗ್ತಿದ್ದೇನೆ’ ಎಂದು ಉತ್ತರಿಸಿದರು.