VIDEO- ನಿಮಗೆಲ್ಲ ಸ್ವಾತಂತ್ರ್ಯ 47ರಲ್ಲಿ ಸಿಕ್ಕಿದ್ರೆ, ನಮಗೆ 48ರಲ್ಲಿ ಸಿಕ್ಕಿದೆ ಸರ್: ಬಿಜೆಪಿ ಶಾಸಕ ರಾಜುಗೌಡ
Update: 2022-03-08 15:28 IST
ಬೆಂಗಳೂರು: 'ನಿಮಗೆಲ್ಲ ಸ್ವಾತಂತ್ರ್ಯ 47ರಲ್ಲಿ ಸಿಕ್ಕಿದ್ರೆ, ನಮಗೆ 48ರಲ್ಲಿ ಸಿಕ್ಕಿದೆ ಸರ್' ಎಂದು ಬಿಜೆಪಿ ಶಾಸಕ ರಾಜುಗೌಡ ಮಂಗಳವಾರ ವಿಧಾನಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ 371ಜೆ ಪ್ರಕಾರ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದ ವಿಚಾರವಾಗಿ ಸದನದಲ್ಲಿ ಶೂನ್ಯ ವೇಳೆ ಶಾಸಕ ಶಿವರಾಜ್ ಪಾಟೀಲ್ ಅವರು ಪ್ರಸ್ತಾಪ ಮಾಡಿದಾಗ ಅದಕ್ಕೆ ಧ್ವನಿಗೂಡಿಸಿದ ಶಾಸಕ ರಾಜುಗೌಡ ಅವರು, 'ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀವು ಕಾಲೇಜು ಸ್ಥಾಪಿಸಿ ಅಲ್ಲಿರುವ ಎಲ್ಲ ಸವಲತ್ತುಗಳನ್ನು ನೀವೇ ತಗೊಂಡು ನಮ್ಮ ಮಕ್ಕಳಿಗೆ ರಿಸರ್ವೇಶನ್ ನಲ್ಲಿ ಕೊಡಂಗಿಲ್ಲ ಅಂದ್ರೆ ಇದು ಯಾವ ನ್ಯಾಯ?' ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲ ಸಮಸ್ಯೆ ಇರುವಾಗ ನಾವು ಶಾಸಕರು ಜನರ ಹತ್ತಿರ ಯಾವ ರೀತಿಯಿಂದ ಮುಖ ಇಟ್ಕೊಂಡು ಹೋಗಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.