ಮಡಿಕೇರಿ: ಮಾ.11 ರಿಂದ ಮೇಕೇರಿ ಉರೂಸ್
ಮಡಿಕೇರಿ : ಮೇಕೇರಿ ಮಖಾಂ ಉರೂಸ್ ಮಾ.11 ರಿಂದ 15ರ ವರೆಗೆ ನಡೆಯಲಿದೆ ಎಂದು ಮೇಕೇರಿ ಕಿಜóರ್ ಜುಮಾ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.
ಮಾ.11 ರಂದು ಜುಮಾ ನಮಾಝ್ ನಂತರ ಮೇಕೇರಿ ಜಮಾಅತ್ ಅಧ್ಯಕ್ಷ ಸಯ್ಯದ್ ಜಮ್ರುದ್ದೀನ್ ಸಾಹೆಬ್ ಧ್ವಜಾರೋಹಣ ನೆರವೇರಿಸಲಿದ್ದು, ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.
ಎರುಮಾಡ್ ತಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರುಸಿ ನೇತೃತ್ವದಲ್ಲಿ ರಾತ್ರಿ ಇಶಾ ನಮಾಝ್ ನಂತರ ದಿಖ್ರ್ ದುಆ ಮಜ್ಲಿಸ್ ಜರುಗಲಿದ್ದು, ಮೇಕೇರಿ ಖತೀಬ್ ಅಬ್ದುಲ್ ಸಲಾಂ ಹಳ್‍ರಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾ.12ರಂದು ಇಶಾ ನಮಾಝ್ ನಂತರ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ನೌಫಲ್ ಸಖಾಫಿ ಕಳಸ ಉಪನ್ಯಾಸ ಮಾಡಲಿದ್ದಾರೆ. ಮಾ.13 ರಂದು ಇಶಾ ನಮಾಝ್ ನಂತರ ಖಮರುದ್ದೀನ್ ಅನ್ವಾರಿ ಸಖಾಫಿ ಮತ್ತು ಸಂಗಡಿಗರು, ನಅತೇ ಶರೀಫ್, ಬಹು ಮುಹೀನುದ್ದೀನ್ ರಿಂದ ಬುರ್ಧಾ ಮಜ್ಲಿಸ್ ನಡೆಯಲಿದೆ.
ಮಾ.14 ರಂದು ಝಹರ್ ನಮಾಝ್ ನಂತರ ಮೌಲೀದ್ ಪಾರಾಯಣ, ಮಧ್ಯಾಹ್ನ 2.30 ಗಂಟೆಗೆ ಸಂದಲ್ ಮೆರವಣಿಗೆ ಮತ್ತು ಸಂಜೆ 4 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.