ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ

Update: 2022-03-08 16:01 GMT

ಮೈಸೂರು,ಮಾ.8: ಚಾಮುಂಡಿ ಬೆಟ್ಟದಲ್ಲಿ  ರೊಪ್ ವೇ ನಿರ್ಮಾಣ ಬೇಡ.  ಪರಿಸರಿ ಉಳಿಸಿ, ಬೆಟ್ಟದ ಪಾವಿತ್ರಿತ್ಯೆಯನ್ನು ಕಾಪಾಡಿ ಎಂದು ಮೈಸೂರು ಕನ್ನಡ ವೇದಿಕೆ ಒತ್ತಾಯಿಸಿದೆ.

ಬೆಟ್ಟದ ಮೆಟ್ಟಿಲು ದ್ವಾರದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮೈಸೂರಿನವರೇ ಆದ ಮಾಜಿ ಅರಣ್ಯ ಮಂತ್ರಿಗಳಾದ   ವಿಜಯಶಂಕರ್ ಅವರು ಪರಿಸರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಹೆಚ್ಚು ಗಿಡಗಳನ್ನು ಬೆಟ್ಟದ ಸುತ್ತಲೂ ನೆಡುವ ಮೂಲಕ ಕೆಲವು ವೃಕ್ಷಗಳ ದತ್ತು ಸ್ವೀಕಾರ ಎಂಬ ಯೋಜನೆಗಳು ಬೆಟ್ಟದ ಪರಿಸರಕ್ಕೆ ಹಾಗೂ ರಕ್ಷಣೆಗೆ ಪೂರಕವಾಗಿತ್ತು. ವಿಪರ್ಯಾಸವೆಂದರೆ ಇದಕ್ಕೆ ತದ್ವಿರುದ್ದವಾಗಿ ಪ್ರವಾಸೋಧ್ಯಮದ ಹೆಸರಿನಲ್ಲಿ ಬೆಟ್ಟದ ಮೇಲೆ ವಾಣಿಜ್ಯ ಸಂಕೀರ್ಣ ಮತ್ತು ರೋಪ್ ವೇ ಎಂಬ ಪರಿಸರ ವಿರೋಧ ಯೋಜನೆಗಳು ಚಾಮುಂಡಿ ಬೆಟ್ಟಕ್ಕೆ ಮಾರಕವಾಗಿದೆ. ರೋಪ್ ವೇ ಗೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯದ ಹಲವು ಕಡೇ ವ್ಯಾಪಕ ವಿರೋಧವನ್ನು ಅಲ್ಲಿಯ ಸ್ಥಳೀಯರು ವಿರೋಧಿಸಿತ್ತಿರುವಾಗಲೇ ಮೈಸೂರಿನಲ್ಲಿ ಪ್ರಸ್ತಾಪವಾಗುತ್ತಿರುವುದು ದುರ್ದೈವದ ಸಂಗತಿ.

ಈಗಾಗಲೇ ಬೆಟ್ಟದ ಸುತ್ತಮುತ್ತ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು ಹಾಗೂ ಖಾಸಗಿ ವ್ಯಕ್ತಿಗಳ ಮತ್ತು ಮಠ ಮಾನ್ಯಗಳು ಧಾನ್ಯ ಮತ್ತು ಪ್ರಕೃತ್ತಿ ಚಿಕಿತ್ಸೆ ಹೆಸರಿನಲ್ಲಿ ಬೆಟ್ಟದ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರೀಕರಣ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಸ್ಥಿತಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರೋಪ್ ವೇ ಯೋಜನೆ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ನಾಗರೀಕರನ್ನು ಕಾಡುತ್ತಿದೆ. ಚಾಮುಂಡಿಬೆಟ್ಟ ಕೇವಲ ಪುಣ್ಯಕ್ಷೇತ್ರವಲ್ಲದೆ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಪ್ರದೇಶ. ಇದನ್ನು ಕಾಪಾಡಿಕೊಂಡು ಹಾಗೂ ಮುಂದುವರೆಸಿಕೊಂಡು ಹೋಗುವುದು ನಮ್ಮೆಲರ ಜವಾಬ್ದಾರಿಯ ಹೊರತು ರೋಪ್ ವೇ ಅಲ್ಲ ಎಂದು ಹೇಳಿದರು.

ಪ್ರತಿ ವರ್ಷ ಮಳೆ ಹೆಚ್ಚಾಗಿ ಬಂದಾಗ ಬೆಟ್ಟದಿಂದ ಹರಿದುಬರುವ ನೀರು ನಗರದ ಕೆಲವು ಕೆರಗಳಿಗೆ ನೀರು ತುಂಬಲಿದ್ದು, ಆ ಮೂಲಕ ಅಂತರಜಲ ಹೆಚ್ಚುತ್ತದೆ. ಇನ್ಯಾದರೂ ಜಿಲ್ಲಾಡಳಿತ ಎಚ್ಚೆತ್ತು ಚಾಮುಂಡಿಬೆಟ್ಟವನ್ನು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸುವ ಮೂಲಕ ಬೆಟ್ಟದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿ ಪರಿಸರ ಅಭಿವೃದ್ದಿಗೆ ಒತ್ತನ್ನು ಕೊಟ್ಟು ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಪೂರಕ ಹಾಗೂ ಬೆಟ್ಟದ ಪಾವಿತ್ರಿತ್ಯಯನ್ನು ಕಾಪಾಡಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎಸ್. ಬಾಲಕೃಷ್ಣ , ಮುಖಂಡರುಗಳಾದ ನಾಲಾಬೀದಿರವಿ, ಬೋಗಾಧಿಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‍ಬಾಬು, ಗೋಪಿ, ಮಹದೇವಸ್ವಾಮಿ, ಸುನೀಲ್‍ಕುಮಾರ್, ಮೊಲಿನಿ, ಸ್ವಾಮಿಗೃಡ್, ಕಾವೇರಿಮ್ಮ, ಅರವಿಂದ್, ಎಲ್.ಐ.ಸಿ.ಸಿದ್ದಪ್ಪ, ಗೋವಿಂದರಾಜು, ಮನೋಹರ್, ಮದನ್, ಆರಾಧ್ಯ, ರಾಧಾಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News