×
Ad

ಕಾಂಗ್ರೆಸ್ ನಲ್ಲಿ ಹೆಚ್ಚು ಸದಸ್ಯತ್ವ ಮಾಡುವವರಿಗೆ ಫ್ರಿಡ್ಜ್‌, ಟಿವಿ, ಮೊಬೈಲ್‌ ಆಮಿಷ: ಬಿಜೆಪಿ ಆರೋಪ

Update: 2022-03-09 13:31 IST

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸದಸ್ಯರ ನೋಂದಾವಣೆಗೂ ಆಮಿಷ ಒಡ್ಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  ಒಂದು ರಾಷ್ಟ್ರೀಯ ಪಕ್ಷ ಎಷ್ಟು ಅಧೋಗತಿಗೆ ತಲುಪಿದೆ ಎಂದರೆ ಸದಸ್ಯರ ನೋಂದಾವಣೆಗೂ ಆಮಿಷ ಒಡ್ಡುತ್ತಿದೆ! ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿಯಲ್ಲಿ ಹೆಚ್ಚು ಸದಸ್ಯತ್ವ ಮಾಡುವವರಿಗೆ ಫ್ರಿಡ್ಜ್‌, ಟಿವಿ, ಮೊಬೈಲ್‌ ಆಮಿಷ ಒಡ್ಡಲಾಗುತ್ತಿದೆ ಎಂದು ಹೇಳಿದೆ.

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಎನ್ನುವುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕಿಲ್ಲ ಎಂದು ಬಿಜೆಪಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News