×
Ad

ದತ್ತಾತ್ರೇಯ ಕುರಹಟ್ಟಿ ಅವರಿಗೆ ಜೀವಮಾನ ರಂಗಸಾಧನೆ ಪ್ರಶಸ್ತಿ: ನಾಟಕ ಅಕಾಡೆಮಿಯ ವಿವಿಧ ಪ್ರಶಸ್ತಿಗಳು ಪ್ರಕಟ

Update: 2022-03-11 22:04 IST

ಬೆಂಗಳೂರು, ಮಾ.11: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನೀಡುವ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರನ್ನು ಪ್ರಕಟಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಾವೇರಿಯ ವೃತ್ತಿರಂಗಭೂಮಿ ಕಲಾವಿದ ಹಾಗೂ ಗಾಯಕ ದತ್ತಾತ್ರೇಯ ಕುರಹಟ್ಟಿ ಅವರು ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ.

ಬೆಳಗಾವಿಯ ಮಹಾಂತೇಶ ರಾಮದುರ್ಗ ‘ಯುವ ರಂಗ ಪ್ರಶಸ್ತಿ’ ಹಾಗೂ ಆದವಾನಿಯ ಬದಿನೇಹಾಳು ಭೀಮಣ್ಣ ‘ಗಡಿನಾಡು ರಂಗ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 23 ರಂಗ ಸಾಧಕರಿಗೆ ವಾರ್ಷಿಕ ರಂಗ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪ್ರಶಸ್ತಿ ತಲಾ 25 ಸಾವಿರ ರೂ.ನಗದು ಬಹುಮಾನ ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ. 

ಬೆಂಗಳೂರಿನ ಎಚ್. ವೆಂಕಟೇಶ್ ಅವರನ್ನು ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ, ಜಲಮಂಡಳಿ ಆರ್. ರಾಮಚಂದ್ರ ಅವರನ್ನು ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ, ಕಲಬುರಗಿಯ ಸೀತಾ ಚಂದ್ರಕಾಂತ ಮಲ್ಲಾಬಾದಿ ಅವರನ್ನು ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿಗೆ, ಕೊಡಗಿನ ಪಿ.ಎ. ಸರಸ್ವತಿ ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರಕ್ಕೆ ಹಾಗೂ ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ಹೊಸಪೇಟೆಯ ಟಿ.ಬಿ. ಡ್ಯಾಮ್ ಕನ್ನಡ ಕಲಾ ಸಂಘ ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳು ತಲಾ 10 ಸಾವಿರ ರೂ.ನಗದು ಬಹುಮಾನ ಹಾಗೂ ನಟರಾಜ ವಿಗ್ರಹ ಫಲಕಗಳನ್ನು ಹೊಂದಿದೆ.

ಹಾಲಯ್ಯ ವೀರಭದ್ರಯ್ಯ ಹುಡೇಜಾಲಿ, ಸಿ.ಜೆ. ಲತಾಶ್ರೀ, ಬಿ. ಗಂಗಣ್ಣ, ಲಲಿತಾಬಾಯಿ ಲಾಲಪ್ಪ ದಶವಂತ, ಹನುಮಂತ ನಿಂಗಪ್ಪ ಸುಣಗದ, ಸುಮಿತ್ರಾ ಯಲ್ಲವ್ವ ಮಾದರ, ಅಡವಯ್ಯ ಸ್ವಾಮಿ ವಿ. ಕುಲಕರ್ಣಿ, ಶಾಂತಪ್ಪ ರುದ್ರಗೌಡ ಜಾಲಿಕೋನಿ, ವಿಜಯಕುಮಾರ ಜಿತೂರಿ, ಕೆ. ವೀರಯ್ಯ ಸ್ವಾಮಿ, ಬಿ.ಪಿ. ಯಮನೂರ ಸಾಬ್, ಡಿ. ಅಡವೀಶಯ್ಯ, ಟಿ. ವಿಮಲಾಕ್ಷಿ, ಪ್ರೊ.ಎಸ್.ಸಿ. ಗೌರಿಶಂಕರ, ಕೆ.ಎಂ. ನಂಜುಂಡಪ್ಪ, ಎಂ.ಎನ್. ಸುರೇಶ, ಸರೋಜಾ ಹೆಗಡೆ, ಸರೋಜಿನಿ ಶೆಟ್ಟಿ, ಚಂದ್ರಹಾಸ ಸುವರ್ಣ, ಡಿ. ಕೆಂಪಣ್ಣ, ಡಾ.ಜೆ. ಶ್ರೀನಿವಾಸಮೂರ್ತಿ, ಸುಧಾ ಹೆಗಡೆ, ಎಂ.ಸಿ. ಸುಂದರೇಶ ವಾರ್ಷಿಕ ರಂಗಪ್ರಶಸ್ತಿ ಪುರಸ್ಕøತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News