ಕಲಬುರಗಿ: ವಿದ್ಯುತ್ ತಂತಿ ತಗುಲಿ ತಾಯಿ, ಮಗ ಸಾವು
Update: 2022-03-12 22:37 IST
ಕಲಬುರಗಿ: ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟ ದಾರುಣ ಘಟನೆ ನಗರದ ಯತಿಮಖಾನಾದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಶಾಹಿನಾ ಬೇಗಂ ರಶೀದ್ ಖಾನ್ (40) ಮತ್ತು ಅವರ ಮಗ ಸೋಹೆಲ್ ಖಾನ್ (20) ಮೃತಪಟ್ಟವರು.
ಮಧ್ಯರಾತ್ರಿ 3-4 ಗಂಟೆಗೆ ಮಳೆ ಬಂದು ಮನೆ ಸೋರಲು ಆರಂಭಿಸಿದಾಗ ಸೋಹೆಲ್ ಖಾನ್ ಅದನ್ನು ಸರಿಪಡಿಸಲು ಹೋಗಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್ ತಂತಿ ತಗುಲಿ ಒದ್ದಾಡುತ್ತಿದ್ದಾಗ ತಾಯಿ ಶಾಹಿನಾ ಬೇಗಂ ರಕ್ಷಣೆಗೆ ಹೋಗಿದ್ದಾರೆ. ಅವರಿಗೂ ವಿದ್ಯುತ್ ತಗುಲಿ ಇಬ್ಬರು ಮೃತಪಟ್ಟಿದ್ದಾರೆ ತಿಳಿದುಬಂದಿದೆ.
ಸ್ಥಳಕ್ಕೆ ಸ್ಟೇಷನ್ ಬಜಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.