×
Ad

ಜಿಲ್ಲಾ ಕೋರ್ಟ್ ಗಳಲ್ಲಿ ನಡೆಯುವ ಪ್ರಮುಖ ವಿದ್ಯಮಾನಗಳನ್ನು ಗಮನಕ್ಕೆ ತನ್ನಿ: ಹೈಕೋರ್ಟ್ ಸುತ್ತೋಲೆ

Update: 2022-03-13 17:01 IST

ಬೆಂಗಳೂರು, ಮಾ. 13: ರಾಜ್ಯದ ಜಿಲ್ಲಾ ನ್ಯಾಯಾಲಯಗಳ ಮುಖ್ಯಸ್ಥರು ವಕೀಲರ ಮುಷ್ಕರ, ಧರಣಿ ಅಥವಾ ಕೋರ್ಟ್ ಕಲಾಪ ಬಹಿಷ್ಕರಿಸಿದಂತಹ ಸಂದರ್ಭಗಳಲ್ಲಿ ಈ ಕುರಿತ ಮಾಹಿತಿಯನ್ನು ತಕ್ಷಣವೇ ಮುಖ್ಯನ್ಯಾಯಮೂರ್ತಿ ಗಮನಕ್ಕೆ ತರಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಕೀಲರ ಸಂಘಗಳು ಅಥವಾ ಬೇರಾವುದೇ ಸಂಘಗಳು ನ್ಯಾಯಾಲಯಗಳ ಕಲಾಪ ಬಹಿಷ್ಕರಿಸುವುದು ಅಥವಾ ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯುವುದನ್ನು ಮಾಡಿದರೆ ಈ ಕುರಿತಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು.

ಹಾಗೆಯೇ, ಮುಷ್ಕರ, ಧರಣಿ ಸೇರಿದಂತೆ ಇತರೆ ಯಾವುದೇ ಪ್ರಮುಖ ವಿದ್ಯಮಾನಗಳು ಇದ್ದಂತಹ ಸಂದರ್ಭದಲ್ಲಿ ಆ ಕುರಿತಂತೆ ಆಯಾ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಲಯದ ಮುಖ್ಯಸ್ಥರು ತಕ್ಷಣವೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News