ಆಧುನಿಕ ಶಿಕ್ಷಣ ದಲಿತ, ಆದಿವಾಸಿ, ಬಡವರ ಮಕ್ಕಳಿಗೆ ಮರೀಚಿಕೆ: ಮಾವಳ್ಳಿ ಶಂಕರ್

Update: 2022-03-13 14:09 GMT

ಬೆಂಗಳೂರು, ಮಾ. 13: ಇಂದಿನ ಆಧುನಿಕ ಶಿಕ್ಷಣ ನೀತಿಗಳು ಸೋತಿದ್ದು, ಆಧುನಿಕ ಶಿಕ್ಷಣ ದಲಿತ, ಆದಿವಾಸಿ ಸೇರಿದಂತೆ ಬಡವರ ಮಕ್ಕಳಿಗೆ ಇಂದಿಗೂ ಮರೀಚಿಕೆಯಾಗಿದೆ' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ. 

ರವಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಅವರ 125ನೇ ಪರಿನಿಬ್ಬಾಣ ಮತ್ತು ಬೆಂಗಳೂರು ನಗರ ಜಿಲ್ಲಾ ಮಾಹಿಳಾ ಒಕ್ಕೂಟದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಸ್ಪøಶ್ಯತೆ ಮತ್ತು ಲಿಂಗಬೇಧದ ಅಸಮಾನತೆಯಲ್ಲಿ ಬೆಂದು ಬಳಲುತ್ತಿದ್ದಾಗ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು  ನೀಡಲು ಸಾವಿತ್ರಿ ಬಾಯಿ ಫುಲೆ ಅಪಾರ ಪರಿಶ್ರಮಪಟ್ಟಿದ್ದಾರೆ. ಆದರೆ ಇಂದಿಗೂ ಶಿಕ್ಷಣವು ಬಡಮಕ್ಕಳಿಗೆ ತಲುಪುತ್ತಿಲ್ಲ. ಶಿಕ್ಷಣ ವ್ಯವಸ್ಥೆಯ ಜಡಗೊಂಡ ದೃಷ್ಟಿಕೋನವನ್ನು ಪಲ್ಲಟಗೊಳಿಸುವಲ್ಲಿ ನಮ್ಮ ಶಿಕ್ಷಣ ನೀತಿಗಳು ಸೋಲುತ್ತಿವೆ ಎಂದರು. 

ಶಿಕ್ಷಣದ ಮೂಲಕ ತಳಸಮುದಾಯಗಳ ಬದುಕಿನಲ್ಲಿ ಸುಧಾರಣೆಗಳಿಗೆ ಕಾರಣರಾದ ಫುಲೆ ದಂಪತಿಗಳು ವಿಶ್ವ ಬ್ರಾತೃತ್ವ, ಮಕ್ಕಳ ಸೂಕ್ಷ್ಮತೆ, ಭೌದ್ಧಿಕವಾಗಿ ಹೆಚ್ಚು ವಸ್ತುನಿಷ್ಠವಾದ ಹಾಗೂ ಸಾಮಾಜಿಕ ಸುಧಾರಣೆಯಂತಹ ಗಂಭೀರ ಶಿಕ್ಷಣಶಾಸ್ತ್ರ ಹಾಗೂ ಶಿಕ್ಷಣ ಕಲೆಗಳನ್ನು ಶಿಕ್ಷಣದಲ್ಲಿ ಅಳವಡಿಸಿದ್ದರು. ಆದರೆ ಇಂದಿನ ಭಾರತದಲ್ಲಿ ಚಲನಶೀಲತೆ ತೆವಳುತ್ತಿರುವುದಕ್ಕೆ ಮೂಲಭೂತ ಕಾರಣ ಚಾಲ್ತಿಯಲ್ಲಿರುವ ಶಿಕ್ಷಣನೀತಿಯನ್ನು ಅಮೂಗ್ರವಾಗಿ ಬದಲಾಯಿಸಲು ಸಾವಿತ್ರಿ ಆಯಿ ಫುಲೆ ಅವರಿಗೆ ಇದ್ದ ಇಚ್ಛಾಶಕ್ತಿ ಹಾಗೂ ಮಾನಸಿಕ ಶಕ್ತಿ ನಮ್ಮಲ್ಲಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಪ್ಪೊತ್ತೊಂದನೆ ಶತಮಾನದಲ್ಲಿ ಮತ್ತೊಮ್ಮೆ ಸಾವಿತ್ರಿಬಾಯಿ ಫುಲೆ ಅವರ ಧ್ವನಿಯನ್ನು ಮುನ್ನೆಲೆಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನೆನಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News