ರಾಜ್ಯದಲ್ಲಿ ಕೊರೋನ ಮತ್ತಷ್ಟು ಇಳಿಕೆ: ರವಿವಾರ 164 ಮಂದಿಗೆ ಕೋವಿಡ್ ದೃಢ, ಸಾವಿನ ಸಂಖ್ಯೆ ಶೂನ್ಯ

Update: 2022-03-13 16:15 GMT

ಬೆಂಗಳೂರು, ಮಾ.13: ರಾಜ್ಯದಲ್ಲಿ ರವಿವಾರ 164 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, 130 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3943806ಕ್ಕೆ ತಲುಪಿದೆ. ಇನ್ನೂ ರಾಜ್ಯದಲ್ಲಿ ಇಂದು(ರವಿವಾರ) ಯಾವುದೇ ಸಾವು ವರದಿಯಾಗಿಲ್ಲ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,018ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,656ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 164 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ  ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರುನಗರ 112, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 21, ದಕ್ಷಿಣಕನ್ನಡ 3, ಕಲಬುರಗಿ 3, ಕೋಲಾರ 1, ಕೊಪ್ಪಳ 1, ಮಂಡ್ಯ 1, ಮೈಸೂರು 7, ತುಮಕೂರು 4, ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.  

ರಾಜಧಾನಿಯಲ್ಲಿ 112 ಜನರಿಗೆ ಕೊರೋನ ದೃಢ

ರಾಜಧಾನಿಯಲ್ಲಿ ರವಿವಾರದಂದು 112 ಜನರಿಗೆ ಕೊರೋನ ಸೋಂಕು ದೃಢಪಟ್ಟಿವೆ. ಒಟ್ಟು  17,61,271  ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 17,80,336 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,942 ಜನರು ಸೋಂಕಿಗೆ ಬಲಿಯಾಗಿದ್ದಾರೆ. 

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News