×
Ad

'ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Update: 2022-03-14 00:06 IST

ಬೆಂಗಳೂರು: ದಿ ಕಾಶ್ಮೀರ್​ ಫೈಲ್ಸ್​ ಹಿಂದಿ ಸಿನೆಮಾಗೆ ರಾಜ್ಯದ ಚಿತ್ರಮಂದಿರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸಿದ ಬೊಮ್ಮಾಯಿ, ಚಲನಚಿತ್ರಕ್ಕೆ ನಮ್ಮ ಬೆಂಬಲವನ್ನು ಸೂಚಿಸುವ  ಮತ್ತು ಅದನ್ನು ವೀಕ್ಷಿಸಲು ನಮ್ಮ ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕದಲ್ಲೂ ಸಿನೆಮಾಕ್ಕೆ ತೆರಿಗೆ ಮುಕ್ತಗೊಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಗುಜರಾತ್, ಹರ್ಯಾಣ, ಮಧ್ಯಪ್ರದೇಶದಲ್ಲೂ ಈಗಾಗಲೇ  ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಸಿನೆಮಾ ಬಗ್ಗೆ ಹಲವು ವಿರೋಧಗಳು ವ್ಯಕ್ತವಾಗಿದೆ. 

ಇದನ್ನೂ ಓದಿ:  'ದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರತಂಡವನ್ನು ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರಾಕರಿಸಿದ ಕಪಿಲ್‌ ಶರ್ಮಾ: ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News