×
Ad

ಖಾತೆಗೂ ನ್ಯಾಯ ನೀಡದೆ, ಪಕ್ಷಕ್ಕೂ ಶಕ್ತಿ ತುಂಬದೇ ಹೊರೆಯಾಗಿರುವ ಸಚಿವರ ಬಗ್ಗೆ ಸಿಎಂ ಗಮನಹರಿಸಲಿ: ಸಿಟಿ ರವಿ

Update: 2022-03-14 13:03 IST

ಬೆಂಗಳೂರು: 'ಖಾತೆಗೂ ನ್ಯಾಯ ಕೊಡದೆ, ಪಕ್ಷಕ್ಕೂ ಶಕ್ತಿ ತುಂಬದೇ ಹೊರೆಯಾಗಿರುವ ಸಚಿವರ ಬಗ್ಗೆ ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರು ಗಂಭೀರವಾಗಿ ಯೋಚನೆ ಮಾಡಬೇಕಿದೆ' ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. 

ವಿಧಾನಸೌಧದ ಬಳಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಚುನಾವಣೆಗೆ ಹೋಗೋದಕ್ಕೆ ಇನ್ನೂ ಒಂದು ವರ್ಷ ಇದ್ದು, ಕಳೆದ ಎರಡು ವರ್ಷಗಳ ಆಡಳಿತದ ಅವಲೋಕನ ಮಾಡಿ ಖಾತೆಗೂ ನ್ಯಾಯ ಕೊಟ್ಟು, ಜನ ಸ್ನೇಹಿಯಾಗಿ ಪಕ್ಷಕ್ಕೂ ಬಲ ತುಂಬಿಸುವ ಕೆಲಸ ಮಾಡುವ ಸಚಿವರಿಗೆ ಹೆಚ್ಚಿನ ಶಕ್ತಿ ಕೊಡಬೇಕು ಎಂದು ತಿಳಿಸಿದರು. 

ಈ ಕುರಿತು ಗಂಭೀರವಾಗಿ ಯೋಚನೆ ಮಾಡಿದರೆ  ಮಾತ್ರ ಮುಂದಿನ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು ಎಂದು ಸಿಟಿ ರವಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News