362 ಗೆಜೆಟೆಡ್ ಪ್ರೊಭೇಷನರಿಗಳ ನೇಮಕಾತಿ ಸಕ್ರಮಕ್ಕೆ ರಾಜ್ಯಪಾಲರ ಅಂಕಿತ
Update: 2022-03-14 22:37 IST
ಬೆಂಗಳೂರು, ಮಾ.14: 'ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ–2022'ಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
2011ನೇ ಸಾಲಿನ ಗೆಜೆಟೆಡ್ ಪ್ರೊಭೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್‍ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವದ ಮುದ್ರೆ ಒತ್ತಲು ರಾಜ್ಯ ಸರಕಾರ ಇದನ್ನು ಸಿದ್ಧಪಡಿಸಿತ್ತು.
ಅಕ್ರಮ, ಭ್ರಷ್ಟಾಚಾರದ ಆರೋಪಗಳ ಸುಳಿಗೆ ಸಿಲುಕಿ ತನಿಖೆ, ವಿಚಾರಣೆಗೆ ಒಳಗಾಗಿ, ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಎಂಟು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿರುವ ಈ ಆಯ್ಕೆ ಪಟ್ಟಿಯನ್ನು ಕಾಯ್ದೆಯ ಮೂಲಕ ಸಕ್ರಮಗೊಳಿಸಲು ಕಳೆದ ಅಧಿವೇಶನದಲ್ಲಿ ಸರಕಾರ ಮಸೂದೆ ಮಂಡಿಸಿತ್ತು. ಚರ್ಚೆ ಇಲ್ಲದೆ ಈ ಮಸೂದೆ ಅಂಗೀಕಾರಗೊಂಡಿತ್ತು.
ಇದೀಗ, ಮಸೂದೆಗೆ ರಾಜ್ಯಪಾಲರು ಅಂಕಿತ ಬಿದ್ದಿರುವುದರಿಂದ, ಸರಕಾರ ಅದರ ರಾಜ್ಯಪತ್ರ ಹೊರಡಿಸಿದೆ.