×
Ad

'ದಿ ಕಾಶ್ಮೀರ್ ಫೈಲ್ಸ್‌ʼಗಿರುವ ತೆರಿಗೆ ವಿನಾಯಿತಿ ʼಜೈ ಭೀಮ್‌ʼ ಗೆ ಇಲ್ಲ: ಪ್ರಿಯಾಂಕ್‌ ಖರ್ಗೆ ಆಕ್ರೋಶ

Update: 2022-03-15 10:35 IST

ಬೆಂಗಳೂರು: ತಮ್ಮ ಪ್ರೊಪಗಾಂಡದ ಸಿನೆಮಾವಾದ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರದ ಯಶಸ್ಸು ಖಾತ್ರಿಪಡಿಸಲು ಯಾವೊಂದು ಅವಕಾಶವನ್ನು ಬಿಜೆಪಿ ಬಿಡುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಇಲ್ಲಿ, ಸ್ಪೀಕರ್‌ ಶಾಸಕರಿಗೆ (ದಿ ಕಾಶ್ಮೀರ್‌ ಫೈಲ್ಸ್‌) ಸಿನೆಮಾ ನೋಡಲು ಪ್ರೋತ್ಸಾಹ ನೀಡುತ್ತಾರೆ, ತೆರಿಗೆ ವಿನಾಯಿತಿ ನೀಡಲಾಗುತ್ತದೆ.  ಆದರೆ, ಜೈ ಭೀಮ್‌, ಆರ್ಟಿಕಲ್‌ 15 ರೀತಿಯ ಸಿನೆಮಾಗಳಿಗೆ ಯಾವ ತೆರಿಗೆ ವಿನಾಯಿತಿಯೂ ನೀಡಲಾಗುವುದಿಲ್ಲ. ಯಾಕೆಂದರೆ ಅದು ಅವರ (ಬಿಜೆಪಿ) ನಿರೂಪಣೆಗೆ ಹೊಂದುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News